Friday, February 8, 2008

thatskannada-comments

ತುಂಬಾ ಸೊಗಸಾದ ಲೇಖನ. ಅನೇಕ ಸಲ ಕೃತಜ್ಞತೆ ಪದ ಕೃತ್ರಿಮವೆನಿಸುತ್ತದೆ ನನಗೆ , ಅದಕ್ಕೆ ಕೃತಜ್ಞತೆ ನಿಜವಾಗಿಯೂ ಅನ್ಯದೇಶೀಯ ಎರವಲು ಪದ. ಸಂದೇಹವೇ ಬೇಡ. "ತುಟಿ ಮೇಲೆ ಬಂದಂಥ ಮಾತೊಂದೆ ಒಂದು, ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು" - ಇದು ನಮ್ಮ ಸಂಸ್ಕೃತಿಯ ಪ್ರತೀಕ. ಪ್ರತಿ ಫೋನ್ ಕಾಲ್ ಕೊನೆಗೂ "Honey I love you" ಉಸುರುವ ಅನೇಕ ಅಮೇರಿಕನ್ನರನ್ನು ನೋಡಿದ್ದೇನೆ ನಾನು. ನಿಜವಾಗಿಯೂ ಇ ಪಾಟಿ ಲವ್ವೂ ನಿಜವಾಗಿಯೂ ಇದ್ದರೆ ಸೊಡಾಚಿಟಿ ಲಾಯರ್ಗಳೆಲ್ಲಾ ದಿವಾಳಿಯಾಗಿರ್ಬಿಕಿತ್ತಲ್ಲವೆ? ಮಾರ್ಕ್ ಟ್ವೇನ್ ಹೇಳುವಂತೆ ನಾಲ್ಕು ಜನ ನೊಡುವವರು ಇಲ್ಲದ್ದಲಿ ನಮ್ಮ ನಡವಳಿಕೆ ತುಂಬಾ ಭಿನ್ನವಾಗಿರುತ್ತದೆ. ಗ್ಲೋಬಲೈಸೇಶನ್ ಆದಂತೆ ನಮ್ಮ ಭಾವನೆಗಳು,ನಡವಳಿಕೆಗಳು, ಅಭಿವ್ಯಕ್ತೆಗಳು ತುಂಬಾ ಥಳುಕಾಗಿ, ನಯ ನಾಜುಕಾಗುತಿವೆ ಏನೋ ಎನಿಸುತಿದೆ, ಒಳಗೊಳಗೆ ಹುಳುಕಾಗುತ್ತಾ, ಶಿಥಿಲವಾಗುತ್ತ. ಮ್ಯಾ ಲಾರ್ಡ್ ಕುಂಬಾಯ್ಯೆ ಎನ್ನುತ್ತಾ. ತಿನ್ನುವ ಅನ್ನ, ಕುಡಿಯುವ ನೀರಿಗೆ ದಿನವಹಿ ಕೃತಜ್ಞತೆ ಸಲ್ಲಿಸುವದು ಕೃತ್ರಿಮತೆಯ ಪರಾಕಾಷ್ಟತೆ. ಯಾವದೇ ಕೃತಿಯಲ್ಲಿಯೂ ಕೃತ್ರಿಮತೆ ಇರಬಾರದೆಂಬುವದಕ್ಕೆ ನಮ್ಮ ಆಚರಣೆಗಳು, ನುಡಿಗಟ್ಟುಗಳು ಆ ತೆರನಾಗಿವೆ ಎಂಬುದು ನನ್ನ ಅನಿಸಿಕೆ.