Thursday, June 7, 2012

ಮೊರೆತದ ಪ್ರೀತಿ

ಕೆಂಡಸಂಪಿಗೆಯಲ್ಲಿ ಪ್ರಕಟಿತ  

ಮೊರೆತದ ಪ್ರೀತಿ

ಅನಿಲ ತಾಳಿಕೋಟಿ ಬರೆದ ದಿನದ ಕವಿತೆ    
ಅನಿಲ ತಾಳಿಕೋಟಿ
ಗುರುವಾರ, 7 ಜೂನ್ 2012 (04:00 IST)

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಅನಿಲ ತಾಳಿಕೋಟಿ ಬರೆದ ಕವಿತೆ. 
ಮೊರೆತದ ಪ್ರೀತಿ
ರಾತ್ರಿಯಲ್ಲಂತೂ ಕಾಡಿಯೇ ಕಾಡುವೆ
ದಿನದಲ್ಲಾದರೂ ಬಿಡು ಸಡಿಲ
ಉಷೆಯಲ್ಲಾದ ಚಿಕ್ಕ ಸಂಗತಿಗಳೇ
ನಿಷೆ ಕಳೆದೊಡನೆ ತತ್ತಿ ಒಡೆದು ಗೆರಿಗೆದರಿ
ಆಗಸಕೆ ನೆಗೆದು ತೇಲುವ ಸ್ವಚ್ಚಂದ ಹಕ್ಕಿ
ಹಕ್ಕಿಲ್ಲದವನ ಗೋಳು ಇದೆ
ಹಕ್ಕಿಯಂತೆ ಹಾರಲಾರದು ರಾತ್ರಿಯಲಿ ಇದು
ಬರಿ ಮನದ ಹಾದರ.
ಪ್ರೀತಿಗೇನು ಕೊರತೆ?
ತೋಡಿದರು ಉಕ್ಕದ ವರತೆ
ಅಗಣಿತ ತಾರೆಗಳ ಹುದುಗಿಸಿಟ್ಟ ಸಮುದ್ರ
ಮೇಲೆಂದು ತೇಲಿ ಬಾರದ ಮುತ್ತು ರತ್ನ
ಕುಳಿತು ನೋಡಿದರೆ ಕಾಲಿಗೆ ಬಂದೆರೆಚುವ ಸಿಂಪೆ, ಚಿಪ್ಪು
ಕಸ ಕಡ್ಡಿ, ದಾಹಕೆ ಲೆಕ್ಕಕ್ಕಿಲ್ಲದ ಶ್ರೀಮಂತಿಕೆ
ತಟಗು ನೀರಿಗೂ ಅಗಿಯಬೇಕು, ಸೋಸಬೇಕು, ಶೋಧಿಸಬೇಕು
ಸಿಕ್ಕಿತೆ ಮುತ್ತೆ?
ಮುತ್ತಿಗೂ, ಪ್ರೀತಿಗೂ ಏನೀ ನಂಟು?
ತತ್ತಿಗೂ ಹಕ್ಕಿಗೂ ಬಿಡಿಸಲಾಗದ ಗಂಟು.
ನಾನೋ ಬಲಿಷ್ಠ ರೆಕ್ಕೆಯ ವೈನತೆಯನಲ್ಲಾ
ಆಳಕ್ಕಿಳಿದು, ಉಸಿರು ಬಿಗಿ ಹಿಡಿದು ಗೊತ್ತಿಲ್ಲಾ
ಅರೆ ಒಡೆದ ಮೊಟ್ಟೆಯಿಂದ ಹೊರಬಂದ ಹೆಳವನು ಅಲ್ಲಾ
ಹೊರಲಾರೆ ದೊರೆಯ, ಹೊರದಿರಲಾರೆ ಕೊಳೆಯ
ಹುಟ್ಟಿದೆ, ಓದಿದೆ, ಬೆಳದೆ, ಓದುತ್ತ ಬೆಳದೆ
ಅಲ್ಲಲ್ಲಿ ಬಸವಳಿದು ಅಳಿಯದೆ ಉಳಿದೆ
ಹೆಚ್ಚಿನದೇನು? ಏನೂ ಇಲ್ಲದೆಯೂ ಇರುವುದೆಲ್ಲಾ
ತುಡಿತದಾಚೆಗೂ ಸಾಧ್ಯವೇ ಇರಲು ಹೃದಯಾ?
ಒಂದು 'ಹನಿ' ಗೆ ಕಾದು ಕುಳಿತು ಸವಕಳಿಯಾಗಿ ಹೋಗುವ ಮುತ್ತು
ನಿನ್ನ ಶಂಖ ಕೊರಳ ಬಿಗಿದಪ್ಪಿದ ತಾಳಿಯ ಗುರುತು.
ಪುಟದ ಮೊದಲಿಗೆ
 
Votes:  4     Rating: 3.75    

 ohhhh tumba ishtavaaythu anil.. bharathi...
 very nice poem Anil. Keep it up!! Ravi Kalmath...
 ಮೊರೆತದ ಪ್ರೀತಿ ಹಲವು ವೈಶಿಷ್ಟ್ಯಗಳ ಕವನ. ನನಗೆ ಮೆಚ್ಚುಗೆಯಾಯಿತು. - Badarinath Palavalli www.badari-poems.blogspot.com...
 Very nice Anil,many of us can relate to this...feelings can not be changed from eras. Through your enthusiasm and passion you have learned,Our appreciation you have earned always. Good poem...Uma...
 sundara kavite... shanti appanna......
 very nice..........
 ಈ ಕವಿತೆಯೂ ಮನದ ಹಾದರವಲ್ಲವೇ ಅನಿಲ್?...
 Re:  ಸ್ವಾಮೀ!, ತಾವು 'ಅಂತರಂಗದ' ಗುಂಗಿನಿಂದ ಹೊರಬನ್ನಿ.
 60's style poetry. new idiom needed for new generation....
 ಅನಿಲರೆ, ಚೆಲುವಾದ ಭಾಷೆ ಹಾಗು ಔಚಿತ್ಯಪೂರ್ಣ ಸಂಕೇತಗಳಿಂದ ನಿಮ್ಮ ಈ ಕವನಕ್ಕೆ ಉತ್ತಮ ಅಭಿವ್ಯಕ್ತಿ ಬಂದಿದೆ. ಅಭಿನಂದನೆಗಳು. -ಸುನಾಥ...
 Alla, saraLavaagi bariyoke enu daaDi antini?...
 dear anil, your poem seems like a poem from the 60's or early 70's. did u by chance influenced by the poetry of that age? today this kind of poems seem anachronistic like the bell-bottom pants of the 80's. -- snighda deshapande, houston...
 Re:  my views are exactly same as Sunaath's. -Anil
 Re:  nobody asked u anything mr sunaath. ur views dont matter.
 Re:  Whether you wear bell bottom or tight jeans, the dress should fit the person. The poem has good focus and expression whatever the style. -Sunaath Deshpande
 ಮಧ್ಯಮವರ್ಗದ ಹಳಹಳಿಕೆ....
 Very nice !!) - chanda...
 "ಹಕ್ಕಿಲ್ಲದವನ ಗೋಳು ಇದೇ" - ಇದು ಆಧುನಿಕ ಯುಗದ ಮಧ್ಯ ವಯಸ್ಸಿನ ಗಂಡಸಿನ ಸಶಕ್ತ ಅಭಿವ್ಯಕ್ತಿ. ಏಕೆಂದರೆ, ಮಧ್ಯ ವಯಸ್ಕ ಗಂಡಸಿಗೆ ಹಕ್ಕಿಲ್ಲ, ಕರ್ತವ್ಯವಿದೆ. "ಅರೆ ಒಡೆದ ಮೊಟ್ಟೆಯಿಂದ ಹೊರಬಂದ ಹೆಳವನು ಅಲ್ಲಾ" - ಆ ಹೆಳವನೆ ಸೂರ್ಯನ ಸಾರಥಿ, ಸಾರಥಿ ಕುಂಟ, ಕುದುರೆಗಳು ಕುರುಡು, ಆದರೂ ಕರ್ತವ್ಯ ಪ್ರಜ್ಞೆಗೆ ಖದ್ಯೋತ (ಸೂರ್ಯ) ಒಂದು ರೂಪಕ. ಇದನ್ನು ಲೇಖಕರು ಸ್ವಲ್ಪ ಹೆಚ್ಚಾಗಿ ದ್ವ್ಹನಿಸಬಹುದಿತ್ತು. "ಹುಟ್ಟಿದೆ, ಓದಿದೆ, ಬೆಳದೆ, ಓದುತ್ತ ಬೆಳದೆ ಅಲ್ಲಲ್ಲಿ ಬಸವಳಿದು ಅಳಿಯದೆ ಉಳಿದೆ", ಇದು ನಮ್ಮೆಲ್ಲರ ಜೀವ-ಗೀತೆಯ ಸಾಲಿನಂತಿದೆ. -Sharadhi...
 Re:  ಶರಧಿ, ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. ಅಡಿಗರಲ್ಲವೇ ಹೇಳಿದ್ದು (ನೆನಪಿದ್ದಷ್ಟು) 'ಕುರುಡನ ಹೆಗಲ ಮೇಲೆ ಕುಳಿತ ಕುಂಟ, ಹೋಗುವದೆಲ್ಲಿಗೋ ಗೊತ್ತಿಲ್ಲ', ನೀವು ಹೇಳಿದಂತೆ ಅರೆ ವೊಡೆದ ಮೊಟ್ಟೆಯಿಂದ ಬಂದವನು ಅರುಣ ಅಪರಿಪಪೂರ್ಣ. ಅದನ್ನು ವಿಸ್ತರಿಸಬೇಕೆಂದು ಕೊಂಡಿದ್ದೆ - ಆಗಲಿಲ್ಲ. ಇನ್ನೂ ಏರಬೇಕಾದ ಮೆಟ್ಟಲುಗಳು ಅನೇಕ. UR ಅನಂತಮೂರ್ತಿ ಯವರು ಇದನ್ನು ಒಂದೆಡೆ ಅತಿ ಸುಂದರವಾಗಿ ವಿಶ್ಲೇಸಿಸಿದ್ದಾರೆ. ಅಭಿಪ್ರಾಯ ಅರುಹಿದ ಎಲ್ಲರಿಗು ಧನ್ಯವಾದಗಳು. -ಅನಿಲ ತಾಳಿಕೋಟಿ
 jeevajeevada nanTu biDasalaarada brahmaganTu emda Adigara saalu nenapaayitu....
 ಮೊರೆತದ ಪ್ರೀತಿಯೋ ಪ್ರೀತಿಯ ಮೊರೆತವೋ, ಒಟ್ಟಿನಲ್ಲಿ ಮುತ್ತು - ಚಿಪ್ಪು, ಹಕ್ಕಿ - ಮೊಟ್ಟೆಗಳ ಸುಂದರ ಪ್ರತಿಮೆಗಳ ಜೊತೆಗೆ ಕನಸಿನ ಸ್ವಾತಂತ್ರ್ಯ, ನಿತ್ಯದ ವಾಸ್ತವಗಳ ದ್ವಂದ್ವವನ್ನೂ ಪೋಣಿಸಿದ್ದೀರಿ. ಚೆನ್ನಾಗಿದೆ ಗಣಪತಿ...
 Good one Anil...Thanks for sharing...
 ತುಂಬಾ ಚೆನ್ನಾಗಿದೆ - keep it up -ಸವಿತಾ...
 anil uttama kavite...mm shaik...
 
 
ಸಂಬಂಧಿಸಿದ ಲೇಖನಗಳು
  ವಿಕಾಸ್ ನೇಗಿಲೋಣಿ ಮಾಡಿರುವ ಜಪಾನಿ ಕವಿ ಪರಿಚಯ
  ತಿರುಮಲೇಶರು ಅನುವಾದಿಸಿದ ಹರ್ಮನ್ ಮೆಲ್ವಿಲ್ ನೀಳ್ಗತೆ
  ಭಾನುವಾರದ ವಿಶೇಷ: ಮನೋಜ್ ಪಿ. ಎಂ. ಬರೆದ ಕತೆ ‘ಕನಸು’
  ಎಂಬತ್ತೈದರ ಚಿತ್ತಾಲರ ಹನೇಹಳ್ಳಿ ಮತ್ತು ದೇವರು
  ಭಾನುವಾರದ ವಿಶೇಷ:ಕಾಮರೂಪಿ ಬರೆದ ಕಥೆ ‘ಉಪಪತ್ತಿಯೋಗ’
  ಬೆಳಗನುಟ್ಟವಳು:ನಟಿ ಭವಾನಿ ಪ್ರಕಾಶ್ ಬರೆದ ಹೊಸ ಕವಿತೆ
  ಮಿತ್ರಾ ವೆಂಕಟ್ರಾಜ ಬರೆದ ಸಣ್ಣಕಥೆ ‘ಬಾಬಿಯಕ್ಕ’
  ಜ. ನಾ. ತೇಜಶ್ರೀ ಅನುವಾದಿಸಿದ ಟಾಗೋರ್ ಕವಿತೆಗಳು
  ವಾರದ ವಿಶೇಷ: ರೇಣುಕಾ ಕತೆ ‘ಎರಡು ದಡಗಳ ಒಳದನಿಗಳು’
  ಭಾನುವಾರದ ವಿಶೇಷ: ಕೆ.ವಿ.ತಿರುಮಲೇಶ್ ಬರೆದ ಕತೆ ‘ಐತ’
  ಭಾನುವಾರದ ವಿಶೇಷ: ಗಣೇಶ್ ನೆಂಪೆ ಕತೆ ‘ಗಿರಿಯಮ್ಮನ ಚೌಡಿ’
  ತಿರುಮಲೇಶ್ ಅನುವಾದಿಸಿದ ವಾಲೆಸ್ ಸ್ಟೀವನ್ಸ್ ಕವಿತೆಗಳು
  ರಶೀದ್ ಅನುವಾದಿಸಿದ ರಿಲ್ಕ್ ಕವಿತೆ
  ಶಾಂತಿ ಅಪ್ಪಣ್ಣ ಬರೆದ ಕತೆ ‘ನನ್ನ ಹಾಡು ನನ್ನದು’
  ತೇಜಶ್ರೀ ಅನುವಾದಿಸಿದ ಒತೈನೊ ಅಮಿಸಿ ಕವಿತೆ
  ರಶೀದ್ ಅನುವಾದಿಸಿದ ಹಾಫಿಝನ ಕವಿತೆ
  ಶ್ರೀಕಾಂತ್ ಪ್ರಭು ಅನುವಾದಿಸಿದ ಕಾಫ್ಕಾ ಕತೆ
  ಮದರಿಯವರ ಗೊಂದಲಿಗ್ಯಾ:ಸಿದ್ಧರಾಮ ಪುಸ್ತಕ ಪರಿಚಯ
  ರಶೀದ್ ಅನುವಾದಿಸಿದ ಒಂದು ಪುಷ್ಕಿನ್ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಬೆಳಗು’
  ವೈಶಾಲಿ ಹೆಗಡೆ ಅನುವಾದಿಸಿದ ಡರೋತಿ ಪಾರ್ಕರ್ ಕವಿತೆಗಳು
  ತೇಜಶ್ರೀ ಅನುವಾದಿಸಿದ ಮೂರು ಯೇಟ್ಸ್ ಕವಿತೆಗಳು
  ಅಬ್ದುಲ್ ರಶೀದ್ ಅನುವಾದಿಸಿದ ಎಜ್ರಾ ಪೌಂಡ್ ಕವಿತೆ
  ವೇಂಪಲ್ಲಿ ಶರೀಫ್ ತೆಲುಗು ಕತೆ ‘ಪಚ್ಚೆ ರಂಗೋಲಿ’
  ಅನಸೂಯಾದೇವಿ ಬರೆದ ದಿನದ ಕವಿತೆ
  ಸುಧಾ ಚಿದಾನಂದ ಗೌಡ ಬರೆದ ದಿನದ ಕವಿತೆ
  ವಿನಾಯಕ ಭಟ್ ಬರೆದ ಕಥೆ ‘ದೂರತೀರ ಯಾನ’
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’