Wednesday, March 7, 2012

ಬೇಡೆನೆಗೆ ಅದರ ಗೊಡವೆ

ಕೆಂಡಸಂಪಿಗೆಯಲ್ಲಿ ಪ್ರಕಟಿತ - ೧೭ ಮೇ ೨೦೧೧
(http://www.kendasampige.com/article.php?id=೪೪೧೨)
ಅನಿಲ ತಾಳಿಕೋಟಿ ಬರೆದ ದಿನದ ಕವಿತೆ




ಪೋರ ಪೋರಿ
ಆಡುತಿಹರು ಲಗೋರಿ
ಬಿಳಿಸುವದೆಲ್ಲ ಎತ್ತಿಡುವದಕ್ಕೆ
ಬಿದ್ದರೂ ಗೆದ್ದರೂ ಬಸಿಯುವ ಬೆವರು

ತೆರೆದ ಹು ಬಾಯಿ
ಒಳಹೊಕ್ಕ ಸಿಪಾಯಿ
ಇಲ್ಲ ಹೊರ ಬರುವ ಇರಾದೇ
ಸಂಗಮದ ನದಿ ಮುಚ್ಚಿಹೋದ ಬದಿ

ಒಳ ಹೊರಗೆ ಹೊರ ಒಳಗೆ
ತಿರಗುವ ಜ್ಯಾಮಿತಿಯ ಪರಿ
ಬಿಸಿಲೋ ಮಳೆಯೋ ಬೇಕಿಲ್ಲ ತಿಳಿ
ಕರಗುವದು ಮಿಯಿಯುದು ಎಲ್ಲ ಒಂದೇ

ಒಂದನೊಂದು ಹೀರಿ
ಗರಿಗೆದುರವ ಮರ ಬೆಳೆದದ್ದು
ಕೆಳಗಿಂದ ಮೇಲೋ ಕೇಂದ್ರದಿಂದ ಪರಿಧಿಗೋ
ಎಲ್ಲದರ ಗುರಿ ಒಂದೇ ಹೀರು ತಿರುವಿ ಬೀರು

ಅಳಕ್ಕಿಳಿಯುವ ಕಿಡಿ
ಅದಕಿಲ್ಲ ಮುಳುಗುವ ದಿಗಿಲು
ಒಳಹೊಕ್ಕಸ್ಟು ಹೊರಬರದಿರುವ ಕೋರು
ಬೆಳಕೆಂದು ಬಂದ ದಾರಿಗೆ ಮರುಗದು ಮರಳದು

ಮರ್ಟಲ್ ಮತ್ತು ಮೆಹಬೂಬಾ

ಕೆಂಡಸಂಪಿಗೆಯಲ್ಲಿ ಪ್ರಕಟಿತ - ಜೂನ್ 2011
(http://www.kendasampige.com/article.php?id=4487)

ಮರ್ಟಲ್ ಮತ್ತು ಮೆಹಬೂಬಾ:ಅನಿಲ್ ತಾಳಿಕೋಟಿ ಲಹರಿ
ಅನಿಲ ತಾಳಿಕೋಟಿ
ಬುಧವಾರ, 15 ಜೂನ್ 2011 (04:20 IST)

ವಾರದ ಹಿಂದೆ ಮನೆಯೆದರು ಬೇಡ ಬೇಡವೆಂದರು ಬೆಳದೆ ಬೆಳೆಯುತ್ತಿದ್ದ ಕ್ರೆಪ ಮರ್ಟಲಗೆ ಮೆಚ್ಚು ಹಚ್ಚಿದ್ದೆ. ತಿಂಗಳಿಂದಲೆ ಅದನ್ನು ಕಿತ್ತೆಸೆಯಿರಿ ಎಂದಿದ್ದಳು ನನ್ನ ಮೆಹಬೂಬಾ. ಫ಼ೌಂಡೆಶನಗೆ ತುಂಬಾ ಹತ್ತಿರವಂತೆ ಅದು. ಹಳೆಯ ಹೊಂಡಾವನ್ನೆ ಹತ್ತು ವರುಷದಿಂದ ಹೋರಾಡುತ್ತ ಓಡಿಸುತ್ತಿರುವ ನಾನು, ‘ಕಿತ್ತಿ ಎಸೆಯಲ್ಲಾ, ಎತ್ತಿ ಬೆರೆಡೆಗೆ ಹಚ್ಚುವೆ, ರಿ ಸಾಯಕಲ್ ಮಾಡುವೆ’ ಎಂದೆ. ಎಂದಿನಂತೆ, ಹೇಳುವದು ಹೆಜ್ಜೇನಾದರೆ, ಮಾಡುವದು ಸಕ್ಕರೆ ಬೇನೆ. ಒಂದೆರಡು ಚದರಡಿ ಮರದ ಸುತ್ತ ಕೊರೆದೆ. ಒಂದೇ, ಎರಡೇ ಬೇರು? ಅದು ರಕ್ತ ಬೀಜಾಸುರನಂತಹದು. ಒಂದರೊಳಗೊಂದು ಹೊಕ್ಕು, ಕೊನೆ ಮೊದಲಿಲ್ಲದ ಜಾಲ. ಶೂ, ಶೊವೆಲ ಬದಲಿಸಿದ್ದಾಯಿತು, ಒಂದು ರೌಂಡು ಗೆಟೊರೆಡ ಹಿರಿದ್ದಾಯಿತು, ಕೇಳುತ್ತಿದ್ದ ಹಾಡುಗಳು ಮುಗಿಯುತ್ತ ಬಂದರು ಇನ್ನು ಅಲುಗಾಡುತ್ತಲಿಲ್ಲ ಮರ್ಟಲು. ಮೆಕ್ಸಿಕನ್ನಗೆ ಮುವತ್ತು ನಿಮಿಷ ತಗೊಳ್ಳುವದು ಈ ಭಾರತಿಯನಿಗೆ ಮೂರು ಘಂಟೆ ಕೊರೆದರೂ, ಬಡೆದರೂ ಮುಗಿಯಲೊಲ್ಲದು. ಮಂಡೆ ಬಿಸಿಯಾಯಿತು. ಕೈಗೆ ಪಾವರ ಟ್ರಿಮ್ಮರ್ ಬಂದಿತು. ಎಲ್ಲೆಲ್ಲಿ ಬೇರಿತ್ತೊ ಅಲ್ಲೆಲ್ಲಾ ಕ್ಷಣದಲ್ಲೆ ಬಿರುಕಾಯಿತು. ಕ್ಲಿಪ್ಪರ್ರು, ಸಿಜ಼ರ್ರು, ಟ್ರಿಮ್ಮರ್ರು ಜೊತೆಗೆ ಅಮ್ಮಾವ್ರು ಸೇರಿ ಕ್ರೆಪ ಮರ್ಟಲ ಮೈಗ್ರೆಟ ಆಗಲು ರೆಡಿ ಆಯಿತು. ತಳ್ಳಾಡಿ ಹಿಂದೆ ಸಾಗಿಸಿದ್ದಾಯಿತು. ಹೊಂಡ ಮೊದಲೆ ತೋಡಿಯಾಗಿತ್ತು. ಟನ್ನು ಮಣ್ಣು ಸುರಿದು ಗಿಡ ಮಡುಗಿದೆ. ಅಂದೆ ಮಳೆ ಬರುವ ಲಕ್ಷಣವಿದ್ದಿದ್ದರಿಂದ ಗ್ಯಾರಂಟಿ ವಾಪಸ ಚಿಗಿಯುತ್ತದೆ ಎಂದೆ, ಸರ್ಟಿಫ಼ೈಡ ಗಾರ್ಡನರನಂತೆ.

ವಾರದ ನಂತರ ನೋಡಿದರೆ ಕ್ರೆಪ ಮರ್ಟಲ ಬಾಡಿ ಬಡವಾಗಿತ್ತು. "didn't come didn't bang" (ಬಂದಿದ್ದಲ್ಲ, ಬಾರಿಸಿದ್ದಲ್ಲ) ಯಾರೊ ನಂದೆ ಡಯಲಾಗಿಂದ ಕೆಣಕಿದಂತಾಯಿತು.
ಎಲ್ಲಕಿಂತ ಮಿಗಿಲಾದ ದು:ಖ ಆ ಬೇರುಗಳನೆಲ್ಲಾ ಬೇರೆಹಮ್ಮಾಗಿ ಬೆಂಡೆತ್ತಿದ್ದು. ’ಹೋಗಿ ಸ್ವಲ್ಪ ಮಲ್ಚ ತೊಗೊಂಡು ಬಂದು ಸುತ್ತ ಹಾಕಿ, ಹಾಗೆ ಒಂದ್ನಾಲ್ಕು ಮಮ್ಸ ತಂದು ಆ ಕ್ರೆಪ ಮರ್ಟಲ ತೆಗೆದ ಜಾಗದಲ್ಲಿ ಹಾಕಿ" ಆಜ್ಞಾಪಿಸಿದಳು ನನ್ನವಳು. ಮಮ್ಸ ತಂದು ನೆಲಕ್ಕೆ ಬಡಿದದ್ದಾಯಿತು. ಇನ್ನು ಮಲ್ಚ ಸುತ್ತೆಲ್ಲ ಮಲಗಿಸಬೇಕು.

"ಒಂದ್ನಾಲಕ್ಕು ಹಳದಿ ಕುಂಕುಮ, ನವರಾತ್ರಿ ಗೊಂಬೆ ಪೂಜೆ ನೋಡಲಿಕ್ಕುಂಟು, ಬೇಗ ರೆಡಿ ಆಗಿಬಿಡ್ರಿ" ನನ್ನವಳ ಬೇಡಿಕೆ. ಬೇಡಿಕೆ ಹೋಗಿ ಆಜ್ಞೆಯಾಗುವ ಮುಂಚೆ ಪೊರೈಸುವದು ಅನುಭವ ಕಲಿಸುವ ಪಾಠ. ವಿಕೆಂಡ ಬಂದರೆ ನಾನೊಬ್ಬ ವಾರಿಯರ, ಕೈಯಲ್ಲಿ ಶೊವೆಲ್ಲು ತಪ್ಪಿದರೆ ಸ್ಟಿರಿಂಗು. "ಪ್ರತಿ ದಿನ ನಿರ್ವಾಹವಿಲ್ಲಾ ನಾನೆ ಓಡಿಸಬೆಕು, ವಿಕೆಂಡ ಮಾತ್ರ ನೀನು ಓಡಿಸಲೆಬೇಕು ಕಾರು" ಅದು ನಮ್ಮ ಕರಾರು. ಶನಿ-ರವಿ ನಾನೆ ಶ್ವೊಫ಼ರ್ರು(chauffeur). ಮೆತ್ತಗೆ ಮಲ್ಚ ಮಡಗಿದೆ.

ಯಾಕಪ್ಪಾ ಇಷ್ಟೊಂದು ಕಷ್ಟಪಡತಾರೆ ಈ ಕನ್ನಡಿಗರು, ಪ್ರತಿ ವರುಷ ಐದು ಪೈಸಾ ಉತ್ಪನ್ನವಿಲ್ಲದ ಕೆಲಸ ಈ ಗೊಂಬೆ ಕೂಡಿಸುವದು ಎಂದುಕೊಂಡೆ. ಬಡ ಮರ್ಟಲನ್ನು ಮರ್ಡರ ಮಾಡಿದ ನೆನಪು ಇನ್ನು ಕೊರೆಯುತಿತ್ತು. "ನೀವು ನೋಡಿದ್ದೆ ಕ್ರಿಕೆಟ್ಟು ಸಾವಿರ ಸಾರಿ ನೊಡಲ್ವ?" ಅವಳು ಎನ್ನುವದು, ನಾನು "ಮುಂಜ ಮುಂಜಾನೆ ಎದ್ದು ಕಂಡ ಕಂಡವರ ಮದುವೆ ನೋಡುವದಕ್ಕಿಂತ ಅದು ಬೆಟ್ಟರ್ರು" ಎನ್ನುವದು, ಪಕ್ಕದಿಂದ ಆರು ವರುಷದ ಮಗ "ಶ್, ಶ್ ಐ ಯಾಮ ವಾಚಿಂಗ ಹಿಯರ್" ಪ್ರತಿವಾರದ ವರಾತಾ ಯಾಕೋ ಇವತ್ತು ಬೇಡಾ ಎನಿಸಿತು. ಗೊಂಬೆ ನೋಡಿದ ಮೇಲೆ ಜ್ಞಾನೋದಯವಾಯಿತು. ನೂರು ದಿನಗಳಿಂದ ಮಕ್ಕಳಿಗೆ ಹೇಳಬೇಕೆಂದಿದ್ದ ರಾಮಾಯಣ, ಮಹಾಭಾರತದ ಕಥೆಗಳು ಮೂರೆ ನಿಮಿಷದಲ್ಲಿ ಮಕ್ಕಳಿಗೆ ಮನವರಿಕೆಯಾದವು. ನೂರು ಮಾತುಗಳು ಹೇಳದ್ದನ್ನು ಮೂರು ಬೊಂಬೆ ಥೀಮುಗಳು ಮನದಟ್ಟಾಗಿಸುತ್ತವೆ. ವಿಲನ ರಾವಣ, ದಾಟ ಬ್ಲು ಬಾಯ ಕೃಷ್ಣ, ಮಾಯವಾಗಬಾರದ ರಾಮ ಸೇತುವೆ, ಹೋದ ವರುಷ ನೋಡಿ ಬಂದ ಮೈಸೂರ ಅರಮನೆ, ಕ್ರಿಸ್ತ ನ ಸಹನೆ, ಮುಂದಿನ ತಲೆಮಾರಿನ ಅಮೆರಿಕನ್ನಡಿಗರಿಗೆ ಸಂಸ್ಕೃತಿಯ ಸಿಂಪಲ ಸ್ಯಾಂಪಲ. ಇನ್ನೊಂದು ಮನೆಯಲ್ಲಿ ಎಲ್ಲವು ಬೆಂಗಾಲಿಮಯ. ಮತ್ತೊಂದರಲ್ಲಿ ಕ್ರಿಕೆಟ್ಟು, ದೇಶಭಕ್ತರ, ಕರ್ನಾಟಕದ ಉದ್ದಗಲದ ಮೆಹರುಗಳು, ಗೊಲಗುಂಬಜ, ಮೇಣಬಸದಿ, ಸಂಗಮ, ಹಳೇಬೀಡು, ಗೊಮ್ಮಟನ ನೂರಾರು ರೆಪ್ಲಿಕಾಗಳು.

ಬೀಡುವೆನೆಂದರೂ ಬಿಡಲೊಲ್ಲೆ ಎನ್ನುವ ತಾಯಿಬೇರಿನ ಸೆಳೆತ. ಮಂದ್ರವಾಗಿ ಬರುತ್ತಿರುವ "ಎಲ್ಲಾದರು ಇರು" ಸಂಗೀತ, ಅದಾದ ಮೇಲೆ "ಯಾವ ಮೋಹನ ಮುರಳಿ ಕರೆಯಿತೋ" ಮುಂದುವರಿಯುತಿತ್ತು. ಮಕ್ಕಳು ಬೆರಗಿನಿಂದ ರಾಮ, ಭಾರತ, ಹಂಪಿ, ಮೈಸೊರ ಅರಗಿಸಿಕೊಂಡರೆ ಅದಕ್ಕಿಂತ ಇನ್ನೆಂತಹ ಸಾರ್ಥಕತೆ ಬೇಕು? ಅದಕ್ಕೆ ನಿದರ್ಶನವೊ ಎಂಬಂತೆ ಅನೇಕರ ಮನೆಯಲ್ಲಿ ಹಬ್ಬದ ವಾತಾವರಣ, ವೆಬ್ ಕ್ಯಾಮ್ ನಲ್ಲಿ ಮನೆಯವರೊಂದಿಗೆ ನೇರ ಪ್ರಸಾರದ ಸಂತಸ.

ಮುಗಿಸಿ ಮನೆಗೆ ಬಂದೆ, ನಾನು ಇಳಿಯುವ ಮೊದಲೆ ಕಾರಿನಿಂದ ಧುಮಿಕಿದ ಮಗ ಕಾರಿನ ಬೆಳಕಿನಲ್ಲಿ ನೋಡುತ್ತ ಕೂಗು ಹಾಕಿದ, "ಪಪ್ಪಿ ಮರ್ಟಲ ಹಾಸ್ ಅ ನಿವ್ ಬಡ". ಉಗುರಿಂದ ಬೊಡ್ಡೇ ಗೀರುತ್ತಾ ಚೀರಿದ "ಹಸರ ಅದ". ಬೆಳಗಾಗುವ ವರೆಗೆ ಕಾಯಬೇಕೆನಿಸಲಿಲ್ಲಾ, ಆಗಲೆ ಮಲ್ಚ ಸುರಿಸಿ ಸರಿಮಾಡಿದೆ. ಓಡುತ್ತ ಬಂದ ಮಗ ನೀರೆರೆಯುತ್ತ ಕೇಳಿದ ’ನೆಕ್ಸ್ಟ ಇಯರ್ ನಮ್ಮನೆಲು ಗೊಂಬೆ ಕೂಡಿಸೋಣವಾ?"

sampige function - Jan2012

ಇವನು - " ಏನ್ರಿ, stage ಭಾರಿ ಮಾಡ್ಯಾರಲ್ರಿ ಸಂಪಿಗೆ ಅವರು"
ಅವನು - "ಹೌದ್ರಿ , ಕನ್ನಡ movie ಯಂತೆ production value ಭಾರಿ ಮ್ಯಾಲೆ ಹೊಗೆದ್ರಿ"
ಇ - "ನಮ್ಮ ಲಗ್ನದಾಗೂ ಇಷ್ಟು arrangement ಆಗಿದಿಲ್ಲ ಬಿಡ್ರಿ"
ಅ - "ಇದು ಒಬ್ಬರ್ದಲ್ರಿ ಲಗ್ನ , ಸಾಮೂಹಿಕ ನೋಡ್ರಿ - ಅದಕ್ಕ ಭರ್ಜರಿ ಮಾಡ್ಯಾರ"
ಇ - "ಖರೆ ಹೇಳಿದ್ರಿ. ಬಂದಕುಳೆ ಅತ್ತರ ಹೊಡದ ಏನೋ ಕೊಟ್ಟಲ್ರಿ sir?"
ಅ - "ಬುಕ್ಕ ಇದ್ದಂಗ ಅದರಿ , ಅಮ್ಯಾಗ ನೋಡುನ ತೊಗೋರಿ, ಪ್ರೊಗ್ರಾಮ್ ಆದ ಮ್ಯಾಗ"
ಇ - "ವಿಚಿತ್ರಾನ್ನ ದ ಜೋಷಿ ಯವರು ಬಂದರಲಾ, ನಗಸ್ತಾರ ಬಿಡ್ರಿ"
ಅ- "ಅವರು ನಗಸ್ಲಿಲ್ಲ ಅಂದ್ರ , ನಮ್ಮ ರಿಷಿ ಅದಾರ ಬಿಡೋ , ನಕ್ಕವರಿಗಿ SB card, ಅತ್ತವರಿಗೆ ಇನ್ನೌನ್ದಿಸ್ಟು ಅತ್ತರ ಹೊಡಿತಾರ"
ಇ - "ಲೋಕಲ್ ಮಂದಿನು ಹರಟೆ ಹೊಡ್ಯಕತ್ತರ್ಲ?"
ಅ- "ಕೇಳಿಲ್ಲೇನು , 'ಉದ್ಯೋಗಿಲ್ಲದ ಬಡಿಗ್ಯ, ಮಗನ ಮೋತಿ ಕೆತ್ತಿ ಮೂರ ಬಡಗಿ ಮಾಡಿದನಂತ'"
ಇ - "ಯಕ್ಸ್ಯಗಾನ ಕ್ಕ ಎಲ್ಲಿಂದೋ ಬಂದಾರನ್ತಲ್ರಿ ಮಂದಿ - Chicago, Toranto ಏನೋ ಅಂದಗಾತ್ರಿ"
ಅ- " ಕಲರ್ combination ನೋಡ್ರಿ , ಏ, ಮನಗಂಡ ರೆಡಿ ಆಗ್ಯಾರ - plane ನ್ಯಾಗ ಹೆಂಗ ಬಿಟ್ರ ಅಂತ ಇವ್ರೆಗೆ"
ಇ - "ಮಳ್ಳ, ಇಲ್ಲೇ ಬಂದ ಮ್ಯಾಗ ರೆಡಿ ಆಗ್ತಾರ ಅವರು - ಎಲ್ಲಾರು PhD ಇದ್ದಂಗ ಅದಾರು"
ಅ- "ಬಯಲಾಟದ ಗತೇ ಬೆಳತನಕ ಇರ್ತದ ಏನ ? ಆರಾಮ ಇಲ್ಲೇ ವಸ್ತಿ ವಗಿಬಹುದು ಇವತ್ತು"
ಇ - "ಇಲ್ಲ , ಇಲ್ಲ - ನಾಳೆ ಬ್ಯಾರೆ ಕಾರ್ಯಕ್ರಮ ಇರ್ತಾವ ,ಇಲ್ಲಿ ಮಂದಿಗೆ - ೧ hour ಅಂತ ಹಾಕ್ಯಾರ"
ಅ- "ಎಪ್ಪಾ , ಬಲರಾಮ, ಕೃಷ್ಣ ಏನ್ ಮಸ್ತ ಮಾತಡತಾರೋ , dailogue ಭಾರಿ ಚುರಕ ನೋಡ. ಏ , MI4 ನ್ಯಾಗ ಜಿಗಧಂಗ ಜಿಗಿತರಾಲ್ಲೋ?"
ಇ - "ವಾವ್ವ, ಜಾಂಬವಂತ ನೋಡಲ್ಲೇ - ವಾವ್ವ ಥೇಟ star wars ದ್ದ Chewbacca ಕಂಢಗ ಕಾಣತಾನಲ್ಲೋ? ಭಾರಿ scary ಅದಾನೋ"
ಅ- "acting ನೋಡು, ಜಬರ್ದಸ್ತ ಅದ ನೋಡ. ತ್ರೇತಾಯುಗದ ಹನುಮಾ, ದ್ವಾಪರ ಯುಗದ ಭೀಮಾ , ಜಾಂಬವಂತ - ಕೃಷ್ಣ ಹೋಗಿ ರಾಮ ಆಗುದ ನೋಡ - ಮಂದಿ ಊಟದ ಲೈನ್ ನ್ಯಾಗ ನಿಂತ , ತಾಟಮರತ ಹಂಗ ನೋಡಕೊತ ನಿಂತಾರ."
ಇ - " ಜೋರಾಗಿ , ಚಪ್ಪಾಳೆ ಅಂತ ನೆನಪ ಮಾಡೋದ ಬ್ಯಾಡ ನೋಡ - ಎಲ್ಲಾರು ಎದ್ದ ನಿಂತ ಬಾರಸ್ಲಿಕತ್ಯಾರ, ಅಸ್ಟರೊಳಗ ನಾಕ ಮಂದಿ ಉಟಕ್ಕ ಲೈನ್ ದಾಟಿ ಹೋದ್ರ ನೋಡ "
ಅ- "ಎಪ್ಪ , ಊಟ ದಿವಸ ಮಾಡುದ ಐತ್ಯೋ - ಅಸ್ಟ್ ಧೂರಿಂದ ಬಂದಾರು - ಮೊದಲ ಅವರ ತಾರೀಫ್ ಮಾಡ್ರೋ"
ಇ- "ಚೊಲೋ ಯಕ್ಸ್ಯಗಾನ ನೋಡಿಧಂಗಾತು ನೋಡು - next ಏನ್ನೈತಿ?"
ಅ- "ನಾ board ಇರದ ಬಸ್ಸನು ಹತ್ತಿ ಬಂದೆ ಇಲ್ಲಿಗೆ - ಏ ಭಾರಿ ಚೊಲೋ ಮಾಡ್ಯಾವ್ರಿ"
ಇ - " 'ಹುಡಗರು', ಹೌದ್ರಿ ಅದೇ ಮೂವಿ ಮೊನ್ನೆ ಇಂಡಿಯಾ ಕ್ಕ ಹೋದಾಗ ನೋಡ್ದಿದ್ರಿ - ಹುಡಿಗ್ಯಾರು ಒಂದು ಕೈ ಮ್ಯಾಲೆ ಅದಾರ ನೋಡ್ರಿ!"
ಅ- "ಹೌದ್ರಿ , ಅಕಿ ವಿದ್ಯಾ ಅಂತ್ರಿ, ಅದ ಜಾಂಬವತಿ ಅದಕ್ರಿ - ಭಾರಿ choreography ಮಾಡಿಸ್ಯಾಳ್ರಿ"
ಇ- "ಏ , ರೊಕ್ಕ ವಸೂಲಿ ಆತ ಬಿಡ್ರಿ ಇವತ್ತು "
ಅ- "ನಡ್ರಿ , ಊಟಾ ಹೊಡದ ಬರುಣ - ಸಂಪಿಗೆ ಊಟ - ಇ ವರುಷದಾಗ ಭಾರಿ ಅದ ನೋಡ್ರಿ "
ಇ - "ಹೊರಗಿಂದ ತರಸ್ತಾರಿ - ಅದಕ್ಕ ರುಚಿ ಜಾಸ್ತಿರೀ - ಪಲ್ಯಾ ನು ಮಸ್ತ ಅದರಿ"
ಅ- "ಅಲ್ಲೇನೋ , ಮ್ಯಾಗಿಂದ ಬಿಳಾಕತದಲ್ಲೋ? ನೋಡಿದ್ರ , ಲೋಟ ಹಿಡಕ್ಕೊಂಡು ಕುಡಿ ಬೇಕನ್ಸ್ತದ"
ಇ- "ಲೇ , ಮಗನ , ಅದು spriteವು , ನಿ ಏನ ವೈನ ಅನ್ತ ತಿಳದಿ ಏನ ? ನಮ್ಮ ವೈನಿ, ವೈನ ಇಡನ್ಗಿಲ್ಲಾ"
ಅ- "ಅಸ್ಟು hollywood ನಷ್ಟು ನಮ್ಮ ಸಂಪಿಗೆ ದ್ದು budget ಇಲ್ಲ ಬಿಡು"
ಇ - "ಎಪ್ಪ, ಹೊಟ್ಟಿ ತುಂಬಿದ ಮ್ಯಾಗ - ತಾಂಬೂಲ ಒಂದ ಬಿದ್ರ , ಖುಶಿ ಆಗ್ತದ ನೋಡ"
ಅ- "ರಿಶಿ ಅಂದ್ರ ಖುಶಿ ನೋಡ - ಇಲ್ಲೇ ಪಾನ ಇಟ್ಟಾರ ನೋಡ - ಎರಡ ತೊಗೊರೋ , ಅಮ್ಮಾವರಿಗೊಂದ, ನನಗೊಂದ"
ಇ- "ಮಕ್ಕಳಿಗ ?"
ಅ- "ಆ ಚಟ ಇಲ್ಲಾ ಬಿಡೋ - ಪಿಜ್ಜಾ ತಿಂದ್ರ ಸಾಕ ಅವಕ್ಕ - ಅದನ್ನು ಇಟ್ಟಿದ್ರಲ್ಲಾ"
ಇ - " ಅಲ್ರಿ, ಪ್ರೊಗ್ರಾಮ್ ಅಂತು ಭಾರಿ ಮಸ್ತ ಇದ್ದು ನೋಡ್ರಿ - ಕಣ್ನಿಗ ಖುಷಿ, ಮನಸ್ಸಿಗ ತೃಪ್ತಿ, ಹೊಟ್ಟಿಗಿಸ್ಟು, ಬ್ರೈನಿಗಸ್ಟು - ಇನ್ನೆನ ಬೇಕ್ರಿ?"
ಅ- "ಏ , ಇನ್ನೂ ಹಾಡ ಆದಾವ್ರಿ, ಬನ್ರಿ ಸ್ವಲ್ಪ ಕುಣಿಯೋಣ"
ಇ- "ಏ , ನನಗ ಎರಡು ಎಡಗಾಲ ಅವ ನೋಡ್ರಿ , ಕುಣಿಯಾಕ್ಕ ಬರಂಗಿಲ್ಲ"
ಅ- "ಏ, ಕುಡದ ಕುಣಿಯೋದ ಅಲ್ರಿ ಇದು - ಸುಮ್ಮ ಹಂಗ - ನಮ್ಮ ಸಂಪಿಗೆ ಬಾಂಧವರು ಹಾಡಖತ್ತಾರ - ಕಾಲು , ಕೈ ಆಡಸುಣ ಬರ್ರಿ"
ಇ- "ಏ ಪ್ರೊಗ್ರಾಮ್ ಗ್ರಾಂಡ್ ಆತ ನೋಡ್ರಿ - ಒಂದ್ ಮರ್ತೆಲ್ಲೋ?"
ಅ- "ಏನಪ , ಊಟ ಆತು , ಗಿಫ್ಟ್ ಆತು - ಮತ್ತೆನಿಂದು ?"
ಇ - "ಅದೇನೋ , ಫೋಟೋ ನೋಡಿ ವಧು ವರರ ಗುರ್ತಿಸಿ e competition ವೋಳಗ , ಕಣ್ಣಾಗ ಎಣ್ಣಿ ಹಾಕ್ಕೌಂಡು ರಾತ್ರಿ ಬಾರಾ ಮಟಾ ಇಕಿ ಅವರ ಇವರನ್ನ ಕಂಡ ಹಿಡದು SB card ಗೆದ್ದಾಳು - claim ಮಾಡಿ ತೊಗೊಳ್ಳುನು ಬಾ"
ಅ- "ಈಗ ಗೊತ್ತಾತ ನೋಡು - ರಿಷಿ ಇದ ಯಾಕ ಮಾಡ್ಯನ ಅಂತ "
ಇ -" ಯಾಕ?"
ಅ- "Obama ಹೇಳಿದಂಗ 'Economy Stimulate" ಮಾಡಾಕ - ನೋಡು - ಹೋಳಿಗಿ ರುಚಿ ಹತ್ತ , ಪಾನ ರುಚಿ ಬಿತ್ತ, ಯಕ್ಸ್ಯಗಾನ, ಹಾಡ ತಲ್ಯಾಗ ಕುಂತಾ, ಇನ್ನ ದಿವಸಾ ಮುಂಜಾನೆ ಸ್ಟಾರ್ ಬಕ್ಕಸಗ ಹೋಗಿ ಸ್ವಲ್ಪ bucks ಖರ್ಚ ಮಾಡ ಅಂತ "
ಇ - "ಇದ ಇರಬೇಕು , 'shovel ready job" ಅಂದ್ರ "
ಅ- "ನಡಿ, ಸ್ವಲ್ಪ ಕುರ್ಚಿ ಎತ್ತಿ ಇಡೋಣ"

-ಅನಿಲ ತಾಳಿಕೋಟಿ

ಮಹಾಶಿವರಾತ್ರಿ

ಸರ್ವರಿಗೂ ಮಹಾಶಿವರಾತ್ರಿಯ ಶುಭಾಶಯಗಳು. ಫಾಲ್ಗುಣ ಮಾಸದ, ಕೃಷ್ಣಪಕ್ಷದ ೧೩ ನೇ ರಾತ್ರಿ, ಬಿಲ್ವ ಪತ್ರಿಗಳಿಂದ ಶಿವನನ್ನು ಅರ್ಚಿಸುತ್ತ, ಬೆಳೆಗ್ಗೆಯಿಂದ ಉಪವಾಸ ಮಾಡಿ, ರಾತ್ರಿಯೆಲ್ಲಾ ಭಜನೆ ಮಾಡುವದಂತು ಆಗದ್ದು- ಕನಿಷ್ಟ, ದೇವಸ್ತಾನಕ್ಕಾದರು ಹೋಗುವ ವಿಚಾರವಿದೆ. ಜೀವನದಲ್ಲಿ ಅತಿ ಸರಳವಾಗಿ ಸುಖ ಸಿಗಬೇಕೆಂದರೆ ಬ್ಹೊಲೆನಾಥನನ್ನು ಭಜಿಸಬೇಕು. ಇಂಗ್ಲಿಷಿನಲ್ಲೊಂದು ಪದವಿದೆ -summum bonum ಎಂದು, ಅಂದರೆ ಉತ್ಕ್ರುಷ್ಟವಾದ , ಅಂತಿಮ ನಿರ್ವಾಣದ ಸ್ತಿತಿಯಂತಹ ಭಾಗ್ಯ - ಸುಮ್ಮನೆ ಬೋನಸ್ ಎಂದು ಸಿಗಬೇಕಾದರೆ , ಬೇರೆ ಯಾವತ್ತು ಮಾಡದಿದ್ದರೂ ಶಿವರಾತ್ರಿಯಂದು ಪ್ರಾರ್ಥನೆ ಮಾಡಲೇಬೇಕು. ಶಿವರಾತ್ರಿಯ ಬಗ್ಗೆ ಅನೇಕ ಐತಿಹ್ಯಗಳಿರುವದು ಪ್ರಾಯಶಃ ಎಲ್ಲರಿಗು ಗೊತ್ತು - ಅದರಲ್ಲಿ ನನಗೆ ಹಿಡಿಸುವದು ಶಿವನ ಪ್ರಳಯ ನಾಟ್ಯ( the Deluge), ಸೃಷ್ಟಿ, ಸ್ತಿಥಿ ಗಳಸ್ಟೇ ಮುಖ್ಯವಾದದ್ದು ಲಯ - ಪ್ರಳಯ - ಆದಿ ಅಥವಾ ಅಂತ್ಯ ವಿಲ್ಲದ್ದು - ಎಂದಿಗೂ ಮುಗಿಯದ ಕಾಲಚಕ್ರದ ಚಲನೆ. ವೃತ್ತವೊಂದರಲ್ಲಿ ಮೊದಲಾವದು? ಕೊನೆಯಾವದು?
ಮೊನ್ನೆ ತಾನೇ ಬೇಂದ್ರೆಯವರ ಕವಿತಾ ಸಂಗ್ರಹ ('ಅರಳು ಮರಳು' ಆದ ಮೇಲೆ ಬರೆದದ್ದು) ಓದುತ್ತಿದ್ದೆ - ಅದರಲ್ಲಿ ಬಂದಿರುವ 'ಪಿನಾಕಿ ರುದ್ರ' ತುಂಬಾ ಚೆನ್ನಾಗಿದೆ - ಅದನ್ನಿಲ್ಲಿ ಯಥಾವತ್ತಾಗಿ ಕೀಲಿಸಿದ್ದೇನೆ. ಅರ್ಥವಾಗದ್ದು ಬಹಳಿದೆ - ಮುಂದೆದೋ ಒಂದು ದಿನ ಅರ್ಥವಾಗಬಹುದು ಅಥವಾ ತಮಗೆ ಗೊತ್ತಿದ್ದರೆ ಅರ್ಥ ತಿಳಿಸಿ. ಸಿಡಿಲು, ಭೂಕಂಪ, ನೆರೆ ಹಾವಳಿ ಎಲ್ಲಾ ಒಮ್ಮೆಲೇ ಅಪ್ಪಳಿಸಿದರೆ ಆಗುವ ಪರಿಣಾಮ ಅನೂಹ್ಯ. ಡಮರಿಸುತ್ತಾ, ಪ್ರಳಯ ನೃತ್ಯ ಮಾಡುವ ಭಯಂಕರ ರುದ್ರ ಇಡೀ ಭೂಮಂಡಲವ ಅಲ್ಲೋಲ ಕಲ್ಲೋಲ ಮಾಡಿಬಿಡಬಲ್ಲ ಕ್ಷಣದಲ್ಲಿ. ನೃತ್ಯದಲ್ಲಿ ಬಾಗಿದ ಬೆನ್ನೆ ಅವನ ಬಿಲ್ಲು , ತೆರೆದ ಜೆಟೆಯೇ ಅವನ ಕ್ರೋಧಾಗ್ನಿ - ತಡೆಯುವವರುಂಟೆ ಭದ್ರನ. ನೋಡಿದೆಡೆಯೆಲ್ಲ ಆಕ್ರಂದನ, ಬೇಡನೆ ಅವನಾಗಿ ಬೇಟೆಗೆ ಹೊರಟರೆ ಉಳಿಗಾಲವೆಲ್ಲಿ? ಕಾಲಯಮನಂತೆ ಕಂಗೊಳಿಸುವ ಆತನನ್ನು ಶಾಂತ ಮಾಡುವದು ನಿರ್ಮಲ ಮನಸಿನ ಪ್ರಾರ್ಥನೆಯೊಂದೆ.

ಪಿನಾಕಿ ರುದ್ರಾ (ದ.ರಾ. ಬೇಂದ್ರೆ)
-----------------------------------
ಸಿಡಿಲಿನ ಮರಿಯೊಂದು ಸಿಡಿದಿತೊ ಅಣ್ಣಾ
ಒಡೆದಿತೊ ಚಂದ್ರನೆ
ಗಂಗೆಯು ಸೋಗು ಹಾಕಿದಳಣ್ಣಾ
ಉರುಳಿದ ಗಿರಿನಂದನೆ

ಹೊಲಹೊಲದಿಂದ ಹೊಲದವ ಬಂದ
ಹರ ಹರ ಹರಿಯುವವನೆ
ಗಿರಿಗಿರಿಯಿಂದಾ ಹರಿದಾವ ನೀರು
ತೊರೆಬಂತು ಎಂದವನೆ

ಬೆನ್ನುಲುಬೆ ಬಿಲ್ಲು, ಹಣಿಗೆಯ ಹಲ್ಲು
ಡವಿಗೆಯ ಕನ್ನಡಿಯ
ಡವಕೆಯ ಹಿಡಿಯೆ ಹಿಡಿಕೆಯ ಮಲ್ಲಿ
ಉಗಳುವೆ ನಾ ತಡಿಯೆ

ಡವಡವ ಎದೆಯಾ ಡಮರುವ ನುಡಿಸಿ
ತಾಂಡವಕ್ಕೆದ್ದವನೆ
ಓಹೋ ಭದ್ರಾ ಪಿನಾಕಿ ರುದ್ರಾ!
ಸೋಹಂ ಸೋಹಂ ಎಂದವನೆ

ಎತ್ತೆತ್ತು ಕುತ್ತಾ ಬಾಳುವುದೆತ್ತಾ
ಮಾತೆ ಮುಗ್ಗರಿಸಿದೆ
ನಿಷಾದ ಭೂಮಿಯ ಆಗಿಯೆ ಸ್ವಾಮಿ
ವಿಷಾದ ಕುಗ್ಗಿಸಿದೆ

ಋಜುವಾತು ಆಗಿ ಯಜು ಮಾತು ಬಂತು
ಯಜ ಯಜ ಎಂದವನೆ
ಭೈರವ ದೇವಾ, ಯಾಕಿ ಭಾವಾ
ಆನಂದ ಇಂಗಿದವನೆ.

--ದ.ರಾ. ಬೇಂದ್ರೆ

ಮುಗ್ಧನ ಮಣಿ

ಕನಿಷ್ಟ ೧೦ ಸಾವಿರದ ಇತಿಹಾಸ ಇರುವ ಅಮೇರಿಕಾದ ಮೂಲನಿವಾಸಿಗಳಿಗೂ, ಭಾರತಿಯ ಬುಡಕಟ್ಟುಗಳಿಗೂ ಇರುವ ಸಾಮ್ಯ ನನ್ನನ್ನು ಯಾವಾಗಲು ಬೆರಗುಗೊಳಿಸುತ್ತದೆ. ಮಾನವ ವಿಕಾಸ ವಿಜ್ಞಾನದ ಮೆಟ್ಟಲುಗಳೆಲ್ಲಾ ಇಂತಹ ಸಾವಿರಾರು ಪಾದ ಧೂಳಿಯಿಂದ ಮುಚ್ಚಿಹೋಗಿವೆ. ಮೂಲನಿವಾಸಿಗಳ ಬಾಳಿನ ಅಧ್ಯಯನ ಬೆರಗುಗೊಳಿಸುವ ಪರಿ ಯಾವುದೇ ವೈಜ್ಞಾನಿಕ ಕಲ್ಪನೆಯಸ್ಟೇ ಅಚ್ಚರಿ ಹುಟ್ಟಿಸುತ್ತದೆ. ಅವರ ಉಗಮ, ಬಳಿಸಿದ ಭಾಷೆ, ನುಡಿಗಟ್ಟು, ಸಾಂಘಿಕ ಬದುಕಿನತ್ತ ನಡೆದದ್ದು, ತಿರುಗಾಟ, ಬೇಟೆ ,ಬರವಣಿಗೆ, ಹೋರಾಟ, ಕಣ್ಣೀರು, ಬರ್ಬರತೆ, ಹೊಂದಾಣಿಕೆ ಪ್ರತಿ ಮಾನವನ ಮಿದುಳಿನಲ್ಲಿ ಅಚ್ಹೊತ್ತಿರುವದರಲ್ಲಿ ಸಂಶಯವೇ ಇಲ್ಲಾ. ನಮೆಲ್ಲ ಇರುವೆಕೆಯ ಮೊತ್ತದ ಮೂಲ ಆಕರಗಳು ಅವರ ಇರುವಿಕೆಯ ಕುರುಹುಗಳು. ಅವರ ಬುಡಕಟ್ಟು ಗಳಿಗಿದ್ದ ಹೆಸರುಗಳು, ಒಳ ಅರ್ಥಗಳು ಒಂದಕ್ಕಿಂತ ಒಂದು ರೋಚಕ. ಇ ಪದ್ಯ Lakota ಮೂಲ ನಿವಾಸಿಗಳ ಕಥೆ ಆಧಾರಿತ. ಲಕ್ಹೋಟಾ ಎಂದರೆ ಸಸ್ಯಗಾವಲಿನ ನಿವಾಸಿಗಳು, ಮೂಲ Sioux ಬುಡಕಟ್ಟು.
------

ಹಸುವಿನ ಮನಸಿನ ಬೇಡರ ಹುಡುಗ
ನೋಡುತ ಬೆಳೆದಾ ಹೂವಿನಂಥಹ ಹುಡುಗಿಯ
ಸಂಪನ್ನ ಪಾದುಕೆ ಪ್ರವಿಣೆ ಅವಳು, ಅವನೋ ಮುರುಕ ಗುಡಿಸಿಲವಾಸಿ
ಪದೆಯುವದೆಂತು ಹೊನ್ನಿನ ಮಣಿಯ?

ಮುಂಬೆಳಕಲಿ ನೋಡಿದ ಮೋಹಕ ಬೆಡಗಿಯ
ನಡುವಲ್ಲೊಂದು ಬಿಂದಿಗೆ, ಹೊರಟಿಹಳು ನೀರಿಗೆ
ದಡಬಡಿಸಿ ನುಡಿದಾ 'ಏ ಬೇ ಎವ್ವಾ, ಗಡಾನ ಕೊಡು ಮೆಟ್ಟ'
ಹರಿದ್ಹೋದ ಮೆಟ್ಟ ಅಜ್ಜಿ ಕೈಯಿಂದ ಕಿತ್ತಿ ಜಿಗಿದೊಡಿದ

ಮೆಕ್ಕೆಜೋಳದ ಬದುವಿನ ನಡುವೆ ನೀರ ಗುಂಡಿ
ಕೋಮಲ ಬಾಲೆ ಕೊಳೆಯಾದಿತು ನಿನ್ನ ಮೊಚ್ಚಿ
ನಾ ತುಂಬುವೆ ನಿನ್ನಯ ಮರಿಗೆ, ಏರಿಸುವೆ ಮಡಿಲಿಗೆ
ಎನುತಾ ಧುಮಿಕಿದ ಹೊಂಡಕೆ ತೋರುತ ತನ್ನ ಕೊಳಕ ಮಾಸಿದ ಮೆಟ್ಟ

ಗಲಗಲಾ ನಕ್ಕಳಾ ಬಾಲೆ, ಹೊಲೆಯುವರಿಲ್ಲವೇ ನಿನಗೆ ಒಳ್ಳೆ ಜೋಡು
ಇರುವಳೇ ಒಬ್ಬ ಅಂಧ ಅಜ್ಜಿ, ಬೇಕದಕೆ ನನಗೆ ಬೇರೆ ಜೋಡು
ನಾನೇನು ಗಾವಿಲಳೇ, ನಂಬಲೇಕೆ ನಾ ನಿನ್ನ
ನಚ್ಚು ನನ್ನ , ನೆಚ್ಚದಿರೆ ನಡಿ ಜೊತೆ ಎನ್ನ

ನೋಡುತಾ ನಿಂತಳಾ ತುಂಟಿ, ತಳದಲಿ ಕುಂತಿಹ ತುಂಟನ
ಉಟ್ಟರು ಕೆಟ್ಟ ಮೆಟ್ಟ ನೋಡಲೇನೂ ಹಟ್ಟಾಗಟ್ಟಾ
ತುಂಬಲಾ, ಬರುವೇಯಾ ಮೆಲುಧನಿಯಲಿ ಕೇಳಿದನಾತ
ಮೃಧು ಮಧುರ ಓಲೆಯಿತು ಸರಿ ಹೋಗುವಾ

ಗಂಟೆ ಕಳೆದರೂ ಬಾರದ ಮಗಳ ಹುಡುಕುತ
ಬಂದಳಾ ಚಿಗವ್ವಾ, ಕಂಡಳು ಒಂದರ ಬದಿ ಒಂದು
ಪಾದದ ಗುರುತಾ, ಮಣ್ಣಿನ ರಾಡಿಯಲಿ
ಹೊಂಡದ ಬದಿಯಲಿ ನಗುತಾ ಬಿದ್ದಿತ್ತು ಬರಿದಾದ ಬಿಂದಿಗಿ

-ಅನಿಲ ತಾಳಿಕೋಟಿ

ಬಾಣದ ಗಾನ


ತೂರಿದೆನೊಂದು ಬಾಣವ ಗಾಳಿಯಲಿ
ಬಿತ್ತದು ಭುವಿಗೆ ನನಗರಿವಿಲ್ಲದಲಿ
ಮಿಂಚಿನ ವೇಗದ ಚಲನೆ ಸಾಧ್ಯವೆ ನೋಡಲು ಎನಗೆ

ಗುಣುಗುಣಿಸಿದೆನೊಂದು ಗೀತೆಯ ಗಾಳಿಯಲಿ
ಹೊಯ್ತದು ನಭಕೆ ನನಗರಿವಿಲ್ಲದಲಿ
ತರಂಗದ ಕಂಪನದ ಬೆರಗು ನಾ ಹಿಡಿದಿಡಲಾಗದದರ ಹರವು

ಎಂದೋ ಮುಂದೊಮ್ಮೆ ಮಾವಿನ ಮರದಲಿ
ಕಂಡೆನಾ ಬಾಣವ ಮೊದಲಿದ್ದ ರೂಪದಲಿ
ನನ್ನ ಗೀತೆಯೋ, ತೇಲುತಿರುವದಲ್ಲಿ ಅದೇ ರಾಗದಲ್ಲಿ ಮಿತ್ರನ ಹೃದಯದಲಿ

ಮೂಲ - Henry Wadsworth Longfellow
ಅನುವಾದ - ಅನಿಲ ತಾಳಿಕೋಟಿ

Tuesday, March 6, 2012

ಓಡು ಓಡು ಓಡಿ ನೋಡು

ಮೊನ್ನೆ ಜಾನಪದ ಸಂಜೆ ಕಾರ್ಯಕ್ರಮವಾದ ಮೇಲೆ ಗಡದ್ದಾಗಿ ನಿದ್ದೆ ಮಾಡಿ ಎದ್ದೆ. ಬೆಳ್ಳಂ ಬೆಳಗ್ಗೆ Markನ ಕ್ವಾಲು 'ಮಳೆಗೆರದು ಟೆನ್ನಿಸ್ court ಎಲ್ಲಾ ಒದ್ದೆ ಆಗಿವೆ, ಬೇಕಾದರೆ ಮಧಾಹ್ನ ಆಡಬಹುದು", ರೋಗಿ ಬಯಸಿದ್ದು, ವೈದ್ಯ ಹೇಳಿದ್ದು same ಆದರೆ shame ಇರಬೇಕಿಲ್ಲ , ಆದರೆ ವೈದ್ಯ ಹೇಳಿದ್ದು ಎದ್ದು ಸ್ವಲ್ಪ ಹೊಟ್ಟೆ ಕರಗಿಸದಿದ್ದರೆ.. ಇ ರೇ ..ಪ್ರಪಂಚ ಕೆಟ್ಟದ್ದು - ಇಲ್ಲಿನ ವೈದ್ಯರಂತು - 'if I were you ...' ಅಂತ ಸುರು ಹಚ್ಚಿಕೊಳ್ಳುತ್ತಾರೆ - 'ನೀನು ನಾನಾಗಿದ್ದರೆ ,ನಿನ್ನ ಹತ್ತಿರ ನಾನ್ಯಾಕೆ ಬರ್ತಿದ್ದೆ ಮಗ'
ಅನಬೇಕೆಂದುಕೊಂಡರೂ - ಪಂಚೆ, ಮುಳ್ಳು ಮೇಲೆ ಬಿದ್ದರು, ಮುಳ್ಳು ಪಂಚೆ ಮೇಲೆ ಬಿದ್ದರು - ಹರಿಯುವದು ಪಂಚೆಯೇ ಅಲ್ಲವೇ - ದುಡ್ಡು ಕೊಟ್ಟು ಯಾಕೆ ಇ ವೈದ್ಯರಿಂದ ಕುಯಿಸಿಕೊಳ್ಳಬೇಕೋ ಎಂದುಕೊಳ್ಳುತ್ತ ಎದ್ದೆ. ಮೊನ್ನೆ ಬೇರೆ ಯಾವಾಗಲು fit ಅಂಡ್ ಟ್ರಿಮ್ ಆಗಿರುವ ಮಿತ್ರನೊಬ್ಬ ಓಡುವದರಿಂದಾಗುವ ಪ್ರಯೋಜನಗಳನ್ನು ಅರುಹಿದ್ದ. ನಾನೇ ಕಾಲು ಕೆದರಿ ಅವನಿಗೆ ಹೊಟ್ಟೆ ಕರಗಿಸಲು ಟೆನ್ನಿಸ್ ಉಪಯುಕ್ತವೋ ಅಥವಾ ನಡೆಯುವದು/ಓಡುವದೋ ಎಂದು ಸವಾಲು ಎಸೆದಿದ್ದೆ, ಬೇಕೆಂದೇ. ಟೆನ್ನಿಸ್ - ಅದು ನಾನಾಡುವ 'doubles' ಟೆನ್ನಿಸ್ aerobic ಅಲ್ಲವೇ ಅಲ್ಲ, ದೇವರಾಣೆಗೂ ಅದರಿಂದ ಐದು ಪೈಸ ಉಪಯೋಗವಿಲ್ಲ ಎಂದು ನನ್ನ ಹಂಡತಿ ತಿಳಿಸಿ ಹೇಳುವ ಹಾಗೆ ಹೇಳಿದ್ದ, ಅದಕ್ಕೆ ಅವನು ಹೇಳಿದ್ದು ಸ್ವಲ್ಪವು ರುಚಿಸಿರಲಿಲ್ಲ. 'if I were you ...' ಎಂದು ಅವನು ಹೇಳುವ ಮೊದಲು ನಾನೇ 'if you were me ...' , ಸಿಗೋ ಎರಡು ಘಂಟೆಯಲ್ಲಿ ಏನು ಮಾಡುತಿದ್ದೆ? ಎಂದು ಕೇಳಿದೆ. 'I would find some inspiration to run ..' ಎಂದು ಕೊನೆಗೆ ಹೇಳಿದ. ಅಡಿಗರು ನೆನಪಾದರು 'ಇರುವದೆಲ್ಲವು ಬಿಟ್ಟು..' ಆರಾಮಾಗಿ ಮಂಚದ ಮೇಲೆ ಮಲಗುವದ ಬಿಟ್ಟು , ಅದು ಟೆನ್ನಿಸೂ ಇರಾದಾಗ? 'ಹೂವು , ಚಂದಿರ ,ಬಾಹು, ಬಂಧನ...' ಏ, ಎದ್ದಾಗಿದೆ. ಇನ್ನೇನು?
'ಇರದುದ ನೆನೆವೊಡೆ' ಎನ್ನುತ್ತಾ closet ಹೊಕ್ಕೆ. ಹುಃಮ್, jacket ಸಿಗ್ತಾ ಇಲ್ಲ ಎಂದು ವಾಪಸ್ಸು ಮಂಚಕ್ಕೆ ಹೋಗಲೇ? ಬೇಡಾ, ಬೇಡಾ ನಿರ್ಧಾರ ಮಾಡಿ ಆಗಿದೆ,ಪ್ರಥಮೆ ವಿಘ್ನ ಬೇಡಾ. shorts ಅಥವಾ sweat pant , ಐದು ನಿಮಿಷದ ದ್ವಂದ್ವ. nike ಶೋ ಏರಿಸಿದೆ. ತಿಂಗಳಾರು ಹಿಂದೆ ಬೆಂಗಳೂರಲ್ಲಿ ಭಾವ ಹೇಳಿದ್ದು ನೆನಪಾಯಿತು 'ಎಲ್ಲದಾರು ಹೋಗಬೇಕೆಂದರೆ best thing ಅಂದ್ರೆ first ದುಡ್ಡು ಕೊಟ್ಟು reservation ಮಾಡಿಸಿಬಿಡುವದು , ಆಗ ಬೇರೆ ದಾರಿ ಇಲ್ಲದೆ ಹೋಗಲೇಬೇಕಾಗುವದು' ಅದೇ ಧೋರಣೆ kumonಗು, ಡಾನ್ಸ್, ಹಾಡಿನ ಕ್ಲಾಸಿಗೂ.

ಇನ್ನು ಐಫೋನ್ ಹುಡುಕಬೇಕು - ಸಿಕ್ಕಿತು , ಹಾಡಿಲ್ಲದಿದ್ದರೆ ಓಡಿ ಏನು ಉಪಯೋಗ? ಮ್ಯೂಸಿಕ್ ಮೇಲೆ ಬೆರಳಾಡಿಸಿದೆ - ಬೆಚ್ಚಿ ಬಿದ್ದೆ - ಒಂದೇ ಒಂದು ಹಾಡು ಇಲ್ಲ ಅದರಲ್ಲಿ. ಮಗರಾಜನ ಪ್ರಭಾವ? ಇ ಕನ್ನಡಿಗರೆಲ್ಲ , ಗಂಡ , ಹೆಂಡತಿ ಐಫೋನ್ ಇಟ್ಟುಗೊಳ್ಳುವ ರಹಸ್ಯ ಎಂದರೆ ಮಕ್ಕಳನ್ನು , ಮಕ್ಕಳಾಗಿ ಬಿಡದೆ ಇರಲು ಕಂಡಿರುವ ಉಪಾಯ. ಸ್ವಲ್ಪ ಕೈ ಕುಂಯಿ ಎಂದರು ಸಾಕು ಕೈಗೊಂದು ಐಫೋನ್ ತುರುಕಿಬಿಡುತ್ತಾರೆ - ನಾನು guilty as charged. ಇನ್ನು function ಗಳಲ್ಲಿ ತಾಯಿಂದರ ಹತ್ತಿರ ಐಫೋನ್ ಇರುವದಕ್ಕಿಂತ ಜಾಸ್ತಿ ಮಕ್ಕಳ ಕೈಯಲ್ಲಿ ಇರುವದೆ ಹೆಚ್ಚು. chargu ಮಾಡುವವರು ಯಾರೋ, use ಮಾಡುವವರು ಯಾರೋ , ಫೋನಲ್ಲಿ screen saver ಮಾತ್ರ ಅವರದು. any way ಹಾಡಿಲ್ಲ , ಅದಕ್ಕೆ ಓಡುವದು ಬೇಡಾ - ಇಲ್ಲ , shoe ಏರಿಸಿ ಆಗಿದೆ- ಮೇಲೆ ಹೋಗಿ sync ಮಾಡುತ್ತ ಕೂತರೆ ಕಾಲುಗಳು ಓಟ ಕಂಡತೆಯೇ. ಹಳೇ mp3 ಕಂಡಿತು. ಈಗೆಲ್ಲ ಟೈಮು ತುಂಬಾ relative ಆಗಿ ಬಿಟ್ಟಿದೆ. ಆರು ತಿಂಗಳು ಎಂದರೆ ಹಳೆಯದು - ಹೆಂಡತಿ, ಮಕ್ಕಳನ್ನು ಬಿಟ್ಟು. ಯಾವ ಪುಣ್ಯಾತ್ಮ ಹೇಳಿದ್ದಾನೋ - ಇ ಧಾವಂತದ ಯುಗದಲ್ಲಿ ಪ್ರತಿ
ಆರು ತಿಂಗಳಿಗೊಮ್ಮೆ RAMವು, powerವು ಬದಲಾಗುತ್ತಾವಂತೆ. mp3 ಹಳೆಯದಾದರೆನಂತೆ, spiritವು ಹೊಸದು. ಹಾಡು ಗುನುಗುತ್ತ ಮನೆಯಿಂದ ಹೊರಬಿದ್ದೆ.

ಓಡೋಡುತ್ತ water bottle ತಂದುಕೊಟ್ಟಳು ನನ್ನ ಮನದನ್ನೆ - ಮನೆಯಲ್ಲಿ ಇಷ್ಟು ಓಡುವುದಾದರೆ, ಹೊರಗೇಕೆ ಬೇಕು ಓಟ? 'ಯಾವ ಮುರಳಿ ಮೋಹನ ಕರೆಯಿತು..' ಕಿವಿಯಲ್ಲಿ ರಿಂಗುಡಿಸುತಿತ್ತು. ಹೊರಬಿದ್ದು ಅಕ್ಕಪಕ್ಕದ ಮನೆಗಳು ದಾಟುವವರೆಗೆ ನಾ ಓಡಲಾರೆ - ಸ್ವಲ್ಪಾದರೂ 'impression' ಕಾಯ್ದುಕೊಳ್ಳಬೇಡವೇ? ತಲೆಯಮೇಲೆ uncಕ್ಯಾಪು, ಮೈಮೇಲೆ dukeದ full sleeve, ಪುಣ್ಯಕ್ಕೆ stateನ sweat pant ಇರಲಿಲ್ಲ , ಇದ್ದಿದ್ದರೆ ಅಲ್ಲಿ ನೋಡು triangle ಓಡ್ತಾ ಇದೆ ಎನ್ನುತಿದ್ದರು ಜನ. ಚಿಲಿಪಿಲಿ ಗುಟ್ಟುವ ಹಕ್ಕಿಗಳು, ಮಳೆ ನಿಂತು ಹೋದ ಆಗಸ - ತೊಳೆದಿಟ್ಟ ಬೋರಲು ಬಿಂದಿಗೆಯಂತೆ ಶುಭ್ರ. ಜೀವನದ ಪ್ರತಿ ಕ್ಷಣ ವನ್ನು, ನಾಳೆ ಇಲ್ಲವೇನೋ ಎಂಬಂತೆ ಅನುಭವಿಸಬೇಕಂತೆ - anandದ rajesh khanna ನೆನಪಾಗಿ ಕಾಡಲಾರಂಭಿಸಿದ - ನಾಳೆ ನಾವೇ ಇರುವದಿಲ್ಲವಾದರೆ ಇವತ್ತು ಓಡಬೇಕೆಕೆ? ಅದಕ್ಕೆ ಓದುವವರಿಗೂ, ಓಡುವವರಿಗೂ ಅಜಗಜಾಂತರ - ಓದಿದವರು ಗಜವಾದರೆ ಓಡುವವರು ಅಜ.

crigan bluff ದಾಟಿದ ಮೇಲೆ ಸುರುವಾಯಿತು ಓಟ. 'ಇರುವದೆಲ್ಲವ ಬಿಟ್ಟು ..', ರೈಟ ಓಡಿ cary parkway ಕಡೆಗೆ ಹೋಗಲೇ ? leftಗೆ hogi maynard ಕಡೆಗೆ ಓಡಲೇ? ಯಾಕೆ ಜೀವನದಲ್ಲಿ ಎಲ್ಲವು ಪೂರ್ವ ನಿರ್ಧರಿತವಲ್ಲ, ಎಲ್ಲ delimmeಯಾ ಕೊಡುಗಳೇ. 'when you cannot decide, go right' ಇದು ಡ್ರೈವ್ ಮಾಡುವಾಗಿನ ನನ್ನ ಫಿಲಾಸಫಿ. ಡ್ರೈವು ಒಂತರ್ಹ ಓಟವೇ ಅಲ್ಲವೇ? ಒಂದು ಹತ್ತು ಮಾರು ಓಡಿರಬೇಕು - ಪಕ್ಕದಲ್ಲಿ ಹೊರಟಿದ್ದ ವ್ಯಾನು ಸ್ವಲ್ಪ ನಿಧಾನವಾಯಿತು. ಇದು ಕ್ಯಾರಿ, safe area, ನನ್ನನ್ನು ಎತ್ತಿ ಕೊಳ್ಳುವ (literally) ಧೈರ್ಯ ಯಾರಿಗಿದೆ? ಅಂಥಹ ವಜನು ವ್ಯಕ್ತಿ ನಾನು. ಇನ್ನು ಸ್ವಲ್ಪ ಓಡಿದೆ,
ವ್ಯಾನು ನಿಂತುಕೊಂಡಿತು -'do you need a ride?' -ಪಾಪ 'udupi' resturantನ ವ್ಯಾನು , ಬೆಳಗ್ಗೆ delivery ಗೆ ಹೋಗಿರಬೇಕು, ಕರುಣೆ ತುಂಬಿ ಬಂದಿರಬೇಕು ಅವನಿಗೆ. 'no i am jogging' ನನ್ನ ಉತ್ತರ convincing ಆಗಿ ಕಾಣಲಿಲ್ಲ ಆತನಿಗೆ - ತೆಲಗಿನಲ್ಲಿ ಏನೋ ಹೇಳಿ ಹೋದ. 'ನಡೆ ಮುಂದೆ ನಡೆ ಮುಂದೆ' .. ಹಳೆಯ ಹಾಡು ಕಿವಿಗೆ ಅಪ್ಪಿತು - ಓಡು ಸಾಗಿತು. preston apartment ಇನ್ನು ದಾಟಿಲ್ಲ - ಇಬ್ಬರು, ಮೂವರು bicyleನವರು ನೋಡುತ್ತಾ ಹೋದರು -'ಹೋದರೆ ಹೋಗು ನನಗೇನು ?' ಮತ್ತೊಂದು ಹಳೆಯ ಹಾಡು. ಸ್ವಲ್ಪ ದಣಿವಾರಿಸಿಕೊಳ್ಳಬೇಕು - ಛೆ, ಒಂದು pedometer ಆದರೂ ತಂದಿದ್ದರೆ ಎಷ್ಟು
ಓಡಿದ್ದೆ ಗೊತ್ತಾಗುತ್ತಿತ್ತು? ಚಿಕ್ಕ ಮಗುವಿಗೆ time ಹಚ್ಚಿ ಗಣಿತ ಮಾಡಲು ಹೇಳಿದಂತೆ - ಒಂದು ಕಣ್ಣು ಯಾವಾಗಲು clock ಮೇಲೆ - ಮಾಡುವದಕ್ಕಿಂತ , ಎಲ್ಲಿ time ಮುಂದೆ ಹೋಗುತ್ತದೆ ಎಂದು ನೋಡುವದೆ ಹೆಚ್ಚು - 'can I change the time?' ಎಂದಂತೆ. ನಮ್ಮ ಮನೆ ಎದುರಿಗಿನವನು - ಕ್ಯಾರಿಯಲ್ಲಿ ಇದೊಂದು ಭಾರಿ ಗೋಳು, ನೋಡಿದಲೆಲ್ಲ ನಮ್ಮವರೇ, ಕರುಣಾಮಯಿಗಳು. ಓಡುವವರನ್ನು ಕಂಡರೆ ಉಕ್ಕಿ ಬರುವ ವಾತ್ಸಲ್ಯ - ಬೇಕಾ ರೈಡ್? ಏನು shapeಲ್ಲಿ ಇರದವರು ಓಡಲೇ ಬಾರದೆ shapeಲ್ಲಿ ಇದ್ದರೆ
ಓಡುವದೇಕೆ? ಎಂತಹ ಗಂಭೀರ ಜಿಜ್ಞಾಸೆ ಇದು. ಮರ್ಕಟಕ್ಕೆನು ಗೊತ್ತು ಮಾಣಿಕ್ಯದ ಮಹತ್ತು? ಕಾರಲ್ಲಿ ಕುಳಿತಾಗ ಅಸ್ಟು ಬೇಗ ಹೋಗುವ ದಾರಿ ಇಗೆಕಿಸ್ಟು ದೂರ, ಹೋಗಿ ಸ್ವಲ್ಪ relativity ಓದಬೇಕು. ಸದ್ಯಕಂತು ಓಡಬೇಕು.

'ಚಲ ಅಕೇಲಾ, ಚಲ ಅಕೇಲಾ ..' ಮತ್ತೆ ಹಳೆಯ ಹಾಡು , ಚಲ , ಚಲ ಅಂತಿದೆ , ಸರಿ ಸ್ವಲ್ಪ ನಿಧಾನಿಸಿ ನಡೆಯಲಾರಂಬಿಸಿದೆ. bmw ಸೊರ್ರನೆ ಮುಂದೆ ಹೋಗಿದ್ದು ನಿಧಾನವಾಯಿತು. ಭೆಳ್ಳನ ಬೆಡಗಿ - ಮನೆ ಎದುರಿನವಳು - neighbourhood ಒಳ್ಳೆಯದಾದರೆ neighbours ಒಳ್ಳೆಯವರೇ ಅಲ್ಲವೇ? 'ಬೇಕಾ ರೈಡ್' ಅಂದರೆ ಏನು ಮಾಡುವದು? ಆಕಡೆ ಹೋಗುತ್ತಿಲ್ಲ ಎಂದು ನುಣಚಿಕೊಳ್ಳಲೆ? ಅಥವಾ - ಯಾಕೆ ಮುಂಜಾ ಮುಂಜಾನೆ ರಗಳೆ ಬೇಡ - ಸುಮ್ಮನೆ ನಿಂತೇ ಒಂದು ಕ್ಷಣ - ಬೆಡಗಿ ಬೈ ಬೈ ಮಾಡಿ ಮುಂದೆ
ಹೋದಳು. ಎಸ್ಟೆ ಅಂದರು ನಮ್ಮವರಸ್ಟು ಕೂಡುಂಡಿ ಬಾಳುವವರಲ್ಲ ಅಲ್ಲವೇ? ಶತಾಯು ಗತಾಯ ಇವತ್ತು ೨ ಮೈಲ ಆದರೂ ಓಡಲೇಬೇಕು. ಹೊಂಡ ಜಿಗಿದು ದಾಟುತ್ತಿರಬೇಕಾದರೆ , ಹೊಂಡ ಒಡಸ್ಸಿ ನಿಧಾನವಾಯಿತು. ಓಡಿಸುತ್ತಾ ಇರುವವಳು , ಹೊಂಡ ಎಂದ ಮೇಲೆ , ಅದು ಕ್ಯಾರಿ ಯಲ್ಲಿ, ಸಂಡೆಯಂದು- 'chances are desi cricket mom'. 'ಹೂವು ಚೆಲುವೆಲ್ಲ ತನದೆಂದಿತು..' ಕಿವಿಯಲ್ಲಿ. ಅಯ್ಯೋ , ಇವರು ತೀರಾ ಪರಿಚಿತರು - ಹೊಟ್ಟೆಯಲ್ಲಾ ಬಿಗಿ ಹಿಡಿದು ಮಾತಾಡಿಸಬೇಕು' ಅದು ಸಾಧ್ಯವೇ ಇಷ್ಟು ಓಡಿದ ಮೇಲೆ?
ಸಟಕ್ಕನೆ ಹೊರಳಿ ಗಿಡದ ಹಿಂದೆ ಜಿಗಿದು ಮರೆಯಾದೆ. 'ಅಡಿಕೆಗೆ ಹೋದ ಮಾನಾ' .. ಯಾವದೋ ಭಾವಗೀತೆ ತೇಲಿ ಬರುತಿತ್ತು mp3 ಯಲ್ಲಿ. ಕ್ಯಾರಿ parkway ಯಿಂದ ಮತ್ತೆ ರೈಟು - james jackson ಮೇಲೆ, 'ಎಲ್ಲಾದರೂ ಇರು , ಎಂತಾದರು ಇರು ..' ಕಿವಿಯಲ್ಲಿ. ಸರ್ರನೆ ಕ್ಯಾರಿ ಪೋಲಿಸ್ ಕಾರೊಂದು ಹೋಯಿತು. ಇದೊಂದು ಕಮ್ಮಿ ಇತ್ತಾ? ಓ , ಇಲ್ಲೇ ಕ್ಯಾರಿ city office ಇರೋದರಿಂದ ಇರಬೇಕು. ಮತ್ತೆ ಮುಂದೆ ಹೋದೆ ಓಡುತ್ತ. ಇನ್ನೊಂದು ಕ್ಯಾರಿ cop ಕಾರು ನನ್ನನ್ನೇ ನೋಡುತ್ತಾ - ನನದೇನು
ಕಾರುಭಾರು? 'ದೇಹಕೆ ಸದಾ ಉಸಿರೇ ಭಾರ ..' ಎಷ್ಟು ನಿಜ ನುಡಿ ಅನ್ನುತ್ತ ಹೊರಟೆ. ಜೋರಾಗಿ ಸದ್ದು ಮಾಡುತ್ತಾ , ವೇಗಾತಿ ವೇಗವಾಗಿ ಬಂದ ambulance ಸಟಕ್ಕನೆ ನನ್ನ ಹತ್ತಿರವೇ ನಿಂತಿತು - ಗಾಭರಿಯಾದೆ, ನನ್ನೊಬ್ಬನನ್ನು ಬಿಟ್ಟರೆ ಬೇರಾರಿಲ್ಲ ಅಲ್ಲಿ , ತಿರುಗಿ ನೋಡಿದೆ - cop ಕಾರ ಹಿಂದೆ ಒಂದು ಹೊಂಡಾ. ಜಿಗಿದು ಓಡಲು ಹೊಂಡಗಳಿಲ್ಲ, ಅಡಗಿಕೊಳ್ಳಲು ದೈರ್ಯವಿಲ್ಲ. ಏನಾದರು ತಪ್ಪಾಯಿತೇ ನನ್ನಿಂದ?. 'ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯೂ ನಡು ನಡುಕ ಹುಚ್ಚು ನಗೆ ಆಯ್ತ ...', ಅವಳ ಕಣ್ಣಲ್ಲಿ concern,
ಮತ್ತೊಮ್ಮೆ ಕಣ್ಣು ಕಿಸಿದು , ಅಗಲಮಾಡಿ ನೋಡಿದೆ - ನನ್ನವಳು, ನೀರು ಕೊಟ್ಟು ಓಡಿ ಬಾ ಎಂದ ನನ್ನ ಮೆಚ್ಚಿನ ಮಡದಿ - ಎಲ್ಲ ನಿಚ್ಚಳವಾಗಿ ತಿಳಿಯಾಯಿತು. ಕ್ಯಾರಿಯಲ್ಲಿರುವವರೆಲ್ಲ 'few good (wo) men' ಗಳೇ. ನಾನೆಲ್ಲೋ ಓಡಿ ಬಿದ್ದೇನು ಎಂಬ ಕಳಕಳಿಯವರೇ. ಇನ್ನು ಓಟ continue ಮಾಡಬೇಕೆ ಅಥವಾ ತೆಪ್ಪಗೆ tennis ಆಡಬೇಕೆ ನೀವೇ ಹೇಳಿ. 'ನಗುವದೋ , ಅಳುವದೋ ನೀವೇ ಹೇಳಿ ...ಇರುವದೋ ಬಿಡುವದೋ ಇ ಊರಿನಲಿ...'