Wednesday, January 29, 2014
ಮೂಕಜ್ಜನ ಸೋಲು - ಭಾಗ ೨
ಮೂಕಜ್ಜನ ಸೋಲು - ಭಾಗ ೨
ಯಾವದೇ ಪ್ರಚಲಿತ ಸಮಸ್ಯೆಗೆ ಒಂದು ಆರೋಗ್ಯಪೂರ್ಣ ಚರ್ಚೆಯಿಂದ ಸಮಾಧಾನ ಕಂಡುಕೊಳ್ಳಬೇಕು ಅನ್ನುವದು ಮೂಲ ಉದ್ದೇಶ - ಅಂತೆಯೇ ಮುಕ್ತ ಮನಸ್ಸಿನ ಮಾತುಕಥೆ ಅಗತ್ಯವಾದದು. ಇಲ್ಲೊಂದೆರಡು ಅಗತ್ಯವಾಗಿ ಮನನವಾಗಬೇಕಾದ ವಿಷಯಗಳು. ಮನಸ್ಸು ಎಲ್ಲ ಸ್ವಭಾವಗಳಿಗೂ ಮೂಲ. ಸ್ವಭಾವ ಬೇಕಾಗಿಯೋ ಬೇಡವಾಗಿಯೋ ಸಂಸ್ಕಾರ,ಸಂಸ್ಕ್ರತಿಯಿಂದ ಪ್ರಭಾವಿತವಾಗಿರುತ್ತದೆ. ಈ ಸಂಸ್ಕ್ರತಿ ಕೂಡಾ ಮಾನವನ ಒಟ್ಟೂ ವಿಕಾಸದ ಮಜಲೆ. ಆ ನಿಟ್ಟಿನಲ್ಲಿ ಪ್ರಪಂಚದ ಎಲ್ಲ ಸಂಸ್ಕ್ರತಿಗಳ ಮೂಲವೂ ಒಂದೆ. ಪ್ರಾಣಿ ಸಹಜ ಮೂಲ ಪ್ರವೃತ್ತಿಯಿಂದ ಸ್ವಲ್ಪ ಮೇಲೆ ಬಂದು ಸಮಾಜಮುಖಿಯಾದ ಮಾನವನ ದೃಷ್ಟಿಯಿಂದ ನೋಡಿದಾಗ ಈ ನಿಟ್ಟಿನಲ್ಲಿ ನಿಚ್ಚಳವಾಗಿ ಗೋಚರಿಸುವ ಕೆಲವು ಸತ್ಯಗಳಿವು.
೧) ತಮ್ಮಂತಿರದ ಬೇರೆಲ್ಲರ ಬೇಕು ಬೇಡಗಳನ್ನು ಒಂದು ಸರ್ವಸಮ್ಮತ ಚೌಕಟ್ಟಿನಲ್ಲಿ ಗೌರವಿಸುವದು.
೨) ಎಲ್ಲ ವೈಯಕ್ತಿಕ ಸ್ವಾತಂತ್ರ್ಯ ಮೂಲಭೂತವಾದದ್ದು, ಲೈಂಗಿಕತೆ ಅತ್ಯಂತ ಖಾಸಗಿಯಾದದ್ದು.
೩) ಇನ್ನೊಬ್ಬರ ಹಕ್ಕು, ಅವಕಾಶ ಎಗರಿಸುವ ವ್ಯವಸ್ಥೆ ವಿರುದ್ದ ನಾವೆಲ್ಲ ಸೆಟೆದೇಳುವದು ಮಾನವೀಯತೆಯ ಲಕ್ಷಣ.
೪) ಪ್ರಕೃತಿದತ್ತವಾದ ಯಾವದೇ ವಿಷಯಕ್ಕೂ ಶಿಕ್ಷೆ ವಿಧಿಸುವ ಅಥವಾ ಹತೋಟಿಯ ಹಕ್ಕು ನ್ಯಾಯಾಲಯಗಳಿಗಿಲ್ಲ.
ನಮಗೆ ಇಲ್ಲಿಯವರೆಗೂ ಗೊತ್ತಿರುವ ಎಲ್ಲ ಮೂಲಗಳಿಂದ ನೋಡುವದಾದರೆ ಸಲಿಂಗಕಾಮ ಮನೋರೋಗವಲ್ಲ, ಅನಾರೋಗ್ಯವೂ ಅಲ್ಲ. ಸಲಿಂಗ ವಂಶ ವಾಹಿಗಳಿನ್ನು ಯಾರು ಇನ್ನೂವರೆಗೆ ಕಂಡುಹಿಡಿಯಲಾಗದಿದ್ದರೂ ಅದರ ಮೂಲ ಜೀವವಿಜ್ಞಾನದ ಸೆಲೆಯಲ್ಲಿ ಇದೆ ಎಂಬುವದು ನಿರ್ವಿವಾದ. ಸಲಿಂಗ ಕಾಮಿಗಳಿಗೂ ಎಲ್ಲರಂತೆ ಗೌರವಯುತವಾಗಿ ಬಾಳುವ ಹಕ್ಕು ಸಂವಿಧಾನದಲ್ಲಿ, ಸಮಾಜದಲ್ಲಿ ಇರಲೇಬೇಕು. ಇವೆಲ್ಲವೂ ಪ್ರಶ್ನಾತೀತವಾಗಿ ದೊರಕಲೆ ಬೇಕಾದ ಪರಭಾರೆ ಮಾಡಲಾಗದ ಹಕ್ಕುಗಳು.
ಮೊನ್ನೆ ಓ.ಎಲ್.ನಾಗಭೂಷಣ ಅವರ ಲೇಖನವೊಂದನ್ನು ಓದುತ್ತಿದ್ದೆ. ಅದನ್ನಿಲ್ಲಿ ಈ ಸಮಸ್ಯೆಗೆ ಹೊಂದಿಸಿಕೊಂಡು ನೆನೆಪಿದ್ದಷ್ಟು ಉದ್ದರಿಸಿದರೆ ತಪ್ಪಾಗಲಿಕ್ಕಿಲ್ಲ ಎನಿಸುತ್ತದೆ. ತೋರಿಕೆಯೇ ಧರ್ಮವಾಗಿದೆ ಈಗ. ಅಲ್ಲಮ ಹೇಳಿದಂತೆ 'ಆಚಾರವನೆ ಕಂಡರು, ವಿಚಾರವನೆ ಕಾಣರು', ಇದರ ನೇರ ಪರಿಣಾಮದ ಫಲಶ್ರುತಿಯೇ ಈ ಅತೀ ಸ್ವಾತಂತ್ರ್ಯಕ್ಕೆ, ಸ್ವೇಚ್ಛಾಚಾರಕ್ಕೆ ಕಾರಣವೇನೋ ಅನಿಸುತ್ತದೆ ಕೆಲವೊಮ್ಮೆ. ತನಗೆಲ್ಲ ಗೊತ್ತು ಎಂಬ ಅಹಂ ತನ್ನ ಅನುಭವವೆ ಅನುಭಾವವೆಂದು ತಪ್ಪಾಗಿಸಿಕೊಳ್ಳುತ್ತದೆ. ಎಲ್ಲ ಘಟನೆಗಳು, ಕಾರ್ಯಕಾರಣಗಳು ತನ್ನನ್ನು ಮೀರಿ ಇಲ್ಲ ಎಂಬ ಭಾವನೆ ಬಲವಾದಗ ಅಲ್ಲಿ ನಂಬಿಕೆ ಕಮ್ಮಿಯಾಗಿ ಅಲ್ಲೊಂದು ನಿರ್ವಾತ ಸ್ತಿತಿ ಉದ್ಭವಿಸಿ ಬಾಹ್ಯ ಒತ್ತಡಗಳು ಅದನ್ನು ಆಕ್ರಮಿಸಿಕೊಳ್ಳುತ್ತವೆ ಎಂಬ ಎಚ್ಚರ ನಮಗಿರಬೇಕಾದದ್ದು ಅತ್ಯಗತ್ಯ. ಇದನ್ನು ಇನ್ನೂ ಒಂದು ಬದಿಯಿಂದ ನೋಡಬಹುದು - ಅಲ್ಲಮನ ಮಾತಿನಂತೆ 'ತನು ಒಂದು ದ್ವೀಪ, ಮನ ಒಂದು ದ್ವೀಪ, ಆಪ್ಯಾಯನ ಒಂದು ದ್ವೀಪ'. ದೇಹ, ಮನಸು, ತೃಪ್ತಿ ಎಂಬ ಮೂರು ವೆಕ್ಟರಗಳು (vector) ಒಂದನ್ನೊಂದು ಬೇರೆ ಬೇರೆ ದಿಕ್ಕಿನಲ್ಲಿ ಹಿಗ್ಗಾ ಮುಗ್ಗಾ ಎಳೆದಾಡುತ್ತ ನಮ್ಮ ಬದುಕು ಈ ಮೂರು 'ಬಲ' ಗಳ ಒಟ್ಟೂ ಫಲಿತಾಂಶದಿಂದ ಸ್ವಯಂ ನಮ್ಮ ಅಂಕೆ ಮೀರಿ - ಯಾವ ಕ್ಷಣದಲ್ಲಿ , ಎಲ್ಲಿ ಏನು ಮಾಡುತ್ತಿದ್ದೇವೆ ಎಂಬುವದು ಕೂಡಾ ಮರೆಯಾಗಿ - ಪ್ರವಾಹಕ್ಕೆ ಸಿಕ್ಕ ತರಗಲತೆಯಂತೆ ಸುತ್ತುತ್ತಲಿದ್ದೇವೋ ಎನಿಸಬಹುದು. ತನು, ಮನ,ತೃಪ್ತಿ ಮನುಷ್ಯರ ಬಾಳನ್ನು ನಿರ್ಧರಿಸುವ ಮೂರು ಮುಖ್ಯ ಧಾರೆಗಳು - ತನುವಿನ ಬಯಕೆ ಆಶೆ, ಆಕಾಂಕ್ಷೆ , ಲೌಕಿಕವೂ, ಐಹಿಕವೂ ಆದರೆ ಮನದ್ದು ದೇವ-ಧರ್ಮದ್ದು,ನಂಬಿಕೆಯದು, ಮಾನವ ಪ್ರೇಮದ್ದು. ತೃಪ್ತಿ ವಿಚಾರ, ತರ್ಕ, ಆಧ್ಯಾತ್ಮಿಕ ಅರಿವು ಕಾಣುವ ಯತ್ನ. ಹಟಕ್ಕೆ, ಅಹಂಗೆ ಇದು ಕಾರಣ. ಇದು ಒಂದು ಥರದಲ್ಲಿ ಹೆಚ್ಚುಗೆಯಿಂದ (affluenza) ಉದ್ಭವಿಸಿದ ಸಮಸ್ಯೆಯೇ ಹೊರತು ಸಮೃದ್ಧಿಯ ಅಭಾವದಿಂದಾದದ್ದಲ್ಲ -ಅದ್ದರಿಂದಲೆ ಇದನ್ನು ಸರಿಯಾಗಿ ಗುರುತಿಸುವದು ಗುರುತರವಾದದ್ದು -ಇಲ್ಲದಿದ್ದರೆ ಪರಿಹಾರ ಅಸಾಧ್ಯ. ಎಲ್ಲದಕ್ಕೂ ದೊಡ್ಡಣ್ಣ ಅಮೆರಿಕವನ್ನು ಅನುಸರಿಸುವದರಿಂದ ಆಮದಾಗಬಹುದಾದ ಸಮಸ್ಯೆಗಳನ್ನು ನಮ್ಮ ನೆಲೆದಿಂದ, ನೆಲೆಯಿಂದ ಅರಿತುಕೊಳ್ಳುವದು ಅಗತ್ಯ. ನಮ್ಮ ದೇಹ, ಬುದ್ಧಿ, ಮನಸ್ಸುಗಳನ್ನು ತಿದ್ದಿಕೊಳ್ಳುತ್ತ, ಹೊಸದನ್ನು ತಾಳ್ಮೆಯಿಂದ ಪರಿಷ್ಕರಿಸುತ್ತಾ ನಾವೀಗ ಮುನ್ನಡೆಯಬೇಕು ಇಲ್ಲದಿದ್ದರೆ ಸುಣ್ಣದ ಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ ಆಗಬಹುದು ನಮ್ಮ ಪರಿಸ್ಥಿತಿ.
ಅತೀ ಸ್ವೇಚ್ಛಾಚಾರ, ವ್ಯಕ್ತಿ ಸ್ವಾತಂತ್ರ್ಯಕ್ಕೂ - ಸ್ವಾಸ್ಥ್ಯಸಮಾಜದ ನಡುವಳಿಕೆಗೂ ನಡುವಿರುವ ತೆಳು ಗೆರೆಯನ್ನು ಕಾಲಿನುಂದುಜ್ಜಿ ಮುಕ್ತತೆಯನ್ನು ವೈಭವಿಕರಿಸುವ ಈ ಚಾಳಿ ಹೊಸದೇನಲ್ಲ. ಯಾವದೋ ಒಂದು ಲೇಬಲ ಹಚ್ಚಿ ಸಲಿಂಗಕಾಮವನ್ನು ಮುಖ್ಯ ಧಾರೆಗೆ ಎಳೆದು ತರುವ ಪ್ರಯತ್ನ ಅವಿರತವಾಗಿ ನಡೆಯುತ್ತಲಿದೆ. ಅದರ ಹೆಚ್ಚಳವನ್ನು ಸ್ವಲ್ಪ ಮಾತ್ರವೂ ಪ್ರಶ್ನಿಸುವವರನ್ನು ಪ್ರತಿಗಾಮಿ ಎಂದೆ ಜರಿಯಲಾಗುತ್ತದೆ ಈ ಹೆಚ್ಚಳವನ್ನು ಪ್ರಶ್ನಿಸುವದು ಕೂಡಾ ನಮ್ಮ ಜವಾಬುದಾರಿಯೆ. ಮೊನ್ನೆ ಕನ್ನಡದ ಹೆಸರಾಂತ ಲೇಖಕಿಯ ಒಳ್ಳೆಯ, ಮಾನವೀಯತೆಯ ಕಥೆ ಓದುತ್ತಲಿದ್ದೆ - ಒಬ್ಬ ಅಜ್ಜ ಮೊಮ್ಮಗಳ ಮಧ್ಯದ ಆಪ್ತ ಕಥೆ. ಕೊನೆ ಮುಟ್ಟುವವರೆಗೂ ಎಲ್ಲಿ ಆ ಅಜ್ಜನ ಇನ್ನೊಂದು ಮಗ್ಗಲು ತೋರಿಸಲು, ಲೇಖಕಿಯ ಅದ್ಭುತ ಕಾಣ್ಕೆ ತೋರಿಸಿಕೊಳ್ಳಲು, ಪ್ರಗತಿಪರವೆಂದು ಬಿಂಬಿಸಿಕೊಳ್ಳಲು ಇಲ್ಲ ಸಲ್ಲದ್ದೆಲ್ಲವನ್ನೂ ಎಳೆದು ತರಲಾಗುತ್ತದೋ ಎಂದು ಆತಂಕಿತನಾಗಿದ್ದೆ. ಎಲ್ಲಿ ಇದರಲ್ಲಿ ಕಪೋಲಕಲ್ಪಿತ ವಿಚಾರಧಾರೆಗಳನ್ನು ನುಸಳಿಸಿ ತಮ್ಮ ದೃಷ್ಟಿಯೇ ಸರ್ವಶ್ರೇಷ್ಟ, ಮಾನವತಾವಾದಿ ಎಂದು ಬೀಗುತ್ತಾರೋ ಎಂದು ಹೆದರಿದ್ದೆ.ಅಬ್ಬಾ ಅಂತಹದೇನೂ ಇಲ್ಲವಲ್ಲ ಎಂದು ನಿಬ್ಬೆರಗಾಗಿ ನಿಸೂರಾದೆ. ಕಾರಂತರ ಮೂಕಜ್ಜಿಯಂತೆ ಎಲ್ಲ ಕಾಣುವ ದಿವ್ಯ ಚಕ್ಷುವಿನ ಸವಾಲಿದು. ಇಲ್ಲಿನ ಸವಾಲೆಂದರೆ ಯಾವದನ್ನು ಅಕ್ಕರೆ, ಒಲವು, ಒಲುಮೆ, ವಾತ್ಸಲ್ಯ, ಮಮತೆ ಎಂದುಕೊಳ್ಳುತ್ತಿದ್ದೆವೋ ಅದನ್ನು ವ್ಯವಸ್ಥಿತವಾಗಿ ಹೊಸಕಿ ಹಾಕಿ ಎಲ್ಲದಕ್ಕೂ ನಮಗೆ ತಿಳಿಯಲೇಬೇಕಾದ ಕಾರಣವನ್ನು ಭೂತಕನ್ನಡಿ ಇಟ್ಟು ಹುಡುಕಿ ಆಹಾ ನಾನು ಹೇಳಿರಲಿಲ್ಲವೆ ಇದು ಹೀಗೆ ಎಂದು ಕುಣಿದಾಡುವ ಪರಿ -ಇನ್ನೂ ಕೆಲವರು ಇನ್ನೂ ಮುಂದುವರಿದು ಸಲಿಂಗಕಾಮವನ್ನು ಸ್ವಲ್ಪ ಪ್ರಶ್ನಿಸಿದರೂ ಕೂಡಾ ಅದನ್ನು ನಮ್ಮ ಅರಿವಿನ ಕುಂದೆಂದೂ ನೂರೋ, ಇನ್ನೂರೋ ವರುಷದ ಹಿಂದೆ ಕೂಡಾ ಹೀಗೆಯೇ ನಾವು ಅಸ್ಪೃಶ್ಯತೆಯ ಬಗ್ಗೆ, ದಾಸ್ಯದ ಬಗ್ಗೆ ತಪ್ಪು ಭಾವಿಸಿರಲಿಲ್ಲವೆ ಎಂದು ತಪ್ಪು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಇಲ್ಲಿ ನಮಗೆ ಜೊಳ್ಳನ್ನು ಗಟ್ಟಿಯಿಂದ ಬೇರ್ಪಡಿಸುವ ಎಚ್ಚರವಿರಬೇಕಾದದ್ದು ಅತ್ಯಗತ್ಯ.
ಎಲ್ಲ ಸತ್ಯಗಳಿಗೂ ಅತ್ಯಂತ ಕಿರು ಮುಗಿತಾಯ (short shelf life) ದ ಕಾಲದಲ್ಲಿದ್ದೇವೆ ನಾವೀಗ. ನನ್ನ ದನಿಯೂ ಸಾಮಾಜಿಕ ಬಹು ಜನರ ನುಡಿಯೊಡನೆ ತಾಳೆಯಾದರೆ ಮಾತ್ರ ಸರಿ ಇಲ್ಲದಿದ್ದರೆ ತಪ್ಪಿದ ಶೃತಿಯಾಗಬಹುದು ಎನ್ನುವ ಹೆದರಿಕೆಯಲ್ಲಿ ಮಾಡಿಕೊಳ್ಳುವ ಒಪ್ಪಂದದಂತೆ ಪ್ರತಿಯೊಬ್ಬರು ಯೋಚಿಸುತ್ತಿದ್ದಾರೆ. ಇದು ಸಮಾಜಮುಖಿಯಾಗುವದರ ಜೀವಾಳ, ತಿರುಳು ಎಂಬ ಹುಸಿ ಕಲ್ಪನೆ. ಯಾರನ್ನೂ, ಯಾಕೆ ನೋಯಿಸಬೇಕು ಅಥವಾ ಯಾರನ್ನೂ ನೋವಿಸದವರ ಥರಹ ಕಾಣಿಸಿಕೊಳ್ಳುವದು ಹೇಗೆ ಎಂಬ ಹಪಾಪಿತನ. ಸಮ ಹಕ್ಕಿನ ವಿಲೋಮ ಪ್ರಯೋಗವಿದು. ಅಮೆರಿಕೆಯಲ್ಲಿ ತುಂಬಿ ತುಳುಕಾಡುವ ಬಂದೂಕಿನ ಸಮಸ್ಯೆಗೆ ಎನ.ಆರ.ಎ.(National Rifle Association) ಗಳ ತಲೆತಿರುಕ ಸಲಹೆಗಳಂತಿರುತ್ತವೆ ಇವು. ಅದಕ್ಕಾಗಿ ತಮ್ಮೆಲ್ಲ ಶಕ್ತಿಯನ್ನು ವ್ಯಯಿಸುವ, ಹಣ ಖರ್ಚು ಮಾಡುವ ಅನೇಕರಿದ್ದಾರೆ. ನೈತಿಕವಾದ ಯಾವದು ಇವರಿಗೆ ಸಲ್ಲದ್ದು - ಅದೆಲ್ಲ ಗೊಡ್ಡು ಸಂಪ್ರದಾಯ ಹಾಗೂ ಮುರಿಯಲೇ ಬೇಕಾದದ್ದಾಗಿ ಕಾಣುತ್ತವೆ ಇವರಿಗೆ. ಇವರೆಲ್ಲಾ ನೂರಕ್ಕೆ ಎಪ್ಪತ್ತರಷ್ಟು ಒಳ್ಳೆಯವರೆ, ಒಳ್ಳೆಯ ಸದುದ್ದೇಶದಿಂದ ಕೂಡಿದವರೆ -ಸಂದೇಹವಿಲ್ಲ. ಯಾವದನ್ನು ನಮ್ಮಿಂದ ತಡೆಗಟ್ಟುವದು ಅಸಾಧ್ಯವೋ ಅದರ ಬಗ್ಗೆ ತಟಸ್ಥವಾಗಿರುವದು ಜಾಣತನವಷ್ಟೆ ಅಲ್ಲ, ಅದೂ ನಮ್ಮ ಕರ್ತವ್ಯ ಕೂಡಾ ಎಂಬ ನಿಲುವಿನವರಿವರು. ಇಲ್ಲಿ ವಿವೇಚನಾ ಪ್ರಜ್ನಾವಂತಿಕೆಯೆಂದರೆನೆಂದು ಹೇಳುವದು ಕಷ್ಟವಾದರೂ ಸ್ವಲ್ಪ ಮಾತ್ರವು ವ್ಯವಹಾರ ಪ್ರಜ್ಞೆಯಿರುವವರು ಇದರ ಪಥಕರಣದ ಅಂತಿಮತೆ ಗುರುತಿಸದೆ ಇರಲಾರರು. ದೊಡ್ಡ ಬೆಳಕೆಂದು ಸೂರ್ಯನ ನಿರೂಕಿಸುತ್ತ ಇದ್ದ ಕಣ್ಣುಗಳನ್ನು ಕುರುಡಾಗಿಸಿಕೊಂಡತ್ತಲ್ಲವೆ ಇದು? ಸ್ವಾನುಭವವನ್ನು ನಮ್ಮ ಸಂಪ್ರದಾಯಕ್ಕೆ ಒಗ್ಗಿಸುವ ಕೆಲಸವನ್ನು ನಾವು ತುರ್ತಾಗಿ ಮಾಡಬೇಕಾಗಿದೆ.
ಅಂದ ಹಾಗೆ ಈ ಮೊದಲು ಹೇಳಿದ ಶಿಖರಭಾನು ಎಂದೂ ಯಾವ ಗುಡ್ಡ, ಬೆಟ್ಟ, ಗಿರಿ, ಪರ್ವತ ಏರಿಲ್ಲ, ಏರುವ ಇರಾದೆಯಿರುವವನು, ಯಾರೋ ಏರಿದ್ದನ್ನು ಕೇಳಿದವನು ಮಾತ್ರ.

Wednesday, January 15, 2014
ಮೂಕಜ್ಜನ ಸೋಲು – ಭಾಗ ೧
ಅವಧಿಯಲ್ಲಿ ಪ್ರಕಟಿತ 'ಸಲಿಂಗರತಿ' ಯ ಬಗ್ಗೆ -- ಮೊದಲ ಭಾಗ
ಸಲಿಂಗರತಿಯನ್ನು ಅಪರಾಧೀಕರಿಸಿ ಐಪಿಸಿ ಸೆ.377ರ
ಮೇಲೆ ನೀಡಿರುವ ತೀರ್ಪನ್ನು ಪುನರ್‌ವಿಮರ್ಶಿಸುವಂತೆ ಎಲ್ಲೆಡೆಯಿಂದಲೂ ಕೂಗು
ಕೇಳಿಬರುತ್ತಿದೆ. ಹಾಗೆಯೇ ಸಲಿಂಗರತಿ ಅನೈಸರ್ಗಿಕ, ಹಾಗಾಗಿ ಅದು ಶಿಕ್ಷಾರ್ಹ ಅಪರಾಧ
ಎನ್ನುವ ವಾದವೂ ಇದೆ. ಅದೇನೆ ಇರಲಿ ಈ ಬಗ್ಗೆ ಒಂದು ಗಂಭಿರವಾದ ಚರ್ಚೆ
ಆಗಬೇಕಾಗಿರುವುದಂತೂ ನಿಜ.
ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ,
ಆದರೆ ಇದು ಲೇವಡಿ ಮಾಡುವ, ಯಾರನ್ನೋ ನಿಂದಿಸುವ ವೇದಿಕೆ ಅಲ್ಲ ಎನ್ನುವುದನ್ನು
ದಯವಿಟ್ಟು ಗಮನಿಸಿ. ನಿಮ್ಮ ವಾದ ಎಲ್ಲೂ ವೈಯಕ್ತಿಕ ನಿಂದನೆ ಆಗದಿರಲಿ..
ಮೂಕಜ್ಜನ ಸೋಲು – ಭಾಗ ೧
ಅನಿಲ ತಾಳಿಕೋಟಿ
ಆತನೊಬ್ಬ
ಉತ್ಸಾಹಿ ಮಾನವ. ತನ್ನ ವಿಸಿಟಿಂಗ ಕಾರ್ಡನಲ್ಲಿ ಹೆಸರಿನಷ್ಟೆ ದೊಡ್ಡದಾಗಿ ಪರ್ವತಾರೋಹಿ
ಎಂದು ಹೆಮ್ಮೆಯಿಂದ ನಮೂದಿಸಿಕೊಂಡಾತ. ಕನಿಷ್ಟ ಐದು ವರುಷದಿಂದ ತಾನು ಏರಬೇಕಾದ ಪ್ರಪಂಚದ
ಅತ್ಯುನ್ನತ ಶಿಖರದ ಅನುಭವವನ್ನು ಹರಳುಗಟ್ಟುವಂತೆ, ಕಿರಿ ಹಿರಿಯರೆಲ್ಲರೂ ಓದಿ
ನಿಬ್ಬೆರಗಾಗುವಂತೆ ಬರೆಯುತ್ತಲಿದ್ದಾನೆ. ಆತ ತಿರುಗು ಹಾಕದ ಆಕರಗಳೊಂದು ಉಳಿದಿಲ್ಲ,
ಮೂಸದ ಜ್ಞಾನಶಾಖೆಗಳಿಲ್ಲ. ಆತ ಭೇಟಿ ಕೊಡದ ಜಾಲಪ್ರಪಂಚದ ಒಂದೇ ಒಂದು ಮಿನ್ನೆಲೆ
ಉಳಿದಿಲ್ಲ ಎನ್ನಬಹುದು. ಆತ ಮಾತನಾಡಿಸದ,ಸಂದರ್ಶಿಸದ ಪರ್ವತಾರೋಹಿಗಳು ಇಲ್ಲವೆ ಇಲ್ಲ
ಎಂದರೂ ಆದೀತು. ಸಧ್ಯಕ್ಕೆ ಉಸಿರಾಡಿಸುವವರಾಗಿದ್ದರೆ ಅವರ ಜೀವನದ ಎಲ್ಲ ಕೊಂಡಿಗಳನ್ನು
ಅವನು ಸಮಗ್ರವಾಗಿ ಪರಿಶೀಲಿಸಿ-ಪ್ರತಿಯೊಂದನ್ನೂ ತಾಳ್ಮೆಯಿಂದ, ಆಸಕ್ತಿಯಿಂದ ತೀರ
ನಾಜೂಕಾಗಿ ಪರಿಷ್ಕರಿಸಿ ಪೇರಿಸಿದ್ದಾನೆ. ಹಿಂದಣ ಲೇಖಕರ ತೊತ್ತನ್ನು ತುತ್ತು ತುತ್ತು
ಮಾಡಿ ನುಂಗಿ ಮುಕ್ಕಿದ್ದಾನೆ. ಮುಂದಣ ಬರಹಗಾರರ ಮನದಾಳ ಬಗಿದು ಶೋಧಿಸಿ, ಜರಡಿ ಹಿಡಿದು
ಹೊಳೆ ಹೊಳೆವ ಹೊನ್ನ ಭಿನ್ನವಾಗಿಸಿ ಉಜ್ಜಿ ಚೊಕ್ಕಟ ಮಾಡಿ ಮಾಡಿ ದಣಿದಿದ್ದಾನೆ. ಆತ
ಕೇಳದ, ನೋಡದ, ಓದದ ಗ್ರಂಥಗಳ್ಯಾವವೂ ಉಳಿದಿಲ್ಲ.
ಈ ಚಿಕ್ಕ ಪ್ರಪಂಚದಲ್ಲಿ ಮಿಲಿಯಗಟ್ಟಲೆ ಹಿಂದಣ
ಜೀವ ಜಂತುಗಳನ್ನು ಆಳವಾಗಿ ಅಭ್ಯಸಿಸಿದ್ದಾನೆ. ಹತ್ತು ಸಾವಿರದಿಂದೀಚೆ ಮಾನವ ನಿರ್ಮಿಸಿದ
ಎಲ್ಲ ಬಗೆಯ ಸಾಹಿತ್ಯ ಅವನಿಗೆ ಕರತಲಾಮಲಕ -ಅದೂ ತಾಳೆಯ ಗರಿಯದ್ದಾಗಿದ್ದಿರಬಹುದು,
ಕಲ್ಲಿನಲ್ಲಿ ಕೆತ್ತಿದ್ದಾಗಿರಬಹುದು, ತಾಮ್ರದಲ್ಲಿ ಕೊರೆದಿದ್ದಾಗಿರಬಹುದು, ಹಾಳೆಯಲ್ಲಿ
ಮೂಡಿಸಿದ್ದಾಗಿರಬಹುದು, ಯಾವದೋ ಸರ್ವರಿನಲ್ಲಿ ಹಾಯಾಗಿ ಮಲಗಿದ್ದ ನುಡಿ
ತಂತುಗಳಾಗಿರಬಹುದು, ಯಾರದೋ ಮನದಾಳದಲ್ಲಿ, ಮಿದುಳಿನಲ್ಲಿ ಅಮೂರ್ತವಾಗಿ ಕುಳಿತಿರುವ
ತತ್ತಿ ಒಡೆದು ಹೊರಬರದ, ತಂಗಾಳಿಗಿನ್ನೂ ಪುಳಕಗೊಳ್ಳದ ಜೀವಿಯ ಭಾವವಾಗಿರಬಹುದು
-ಅವನ್ನೆಲ್ಲಾ ಆತ ಖುದ್ದು ಖಾಸಗಿಯಾಗಿ ಅನುಭವಿಸಿ ತನ್ನ ಅಪಾರ ಜಾಣ್ಮೆಯ ಮೂಸೆಯಲ್ಲಿ
ನಿಗಿ ನಿಗಿ ಕೆಂಡದಲ್ಲಿ ಕಾಯಿಸಿ ನೋಡಿದ್ದಾನೆ. ಮೈ-ಮನಸುಗಳ ಸಂಕೀರ್ಣ ಆವರಣವನ್ನು
ಅನಾವರಣ ಮಾಡಿದ್ದಾನೆ. ಆತ ಶೋಧಿಸದ ಸತ್ಯವೆಂತಹದು? ಕೂಲಂಕಷವಾದ ಪ್ರಯೋಗವಾದ್ದರಿಂದ
ಸುಳ್ಳಾಗಿರುವದು ಅಶಕ್ಯ. ತಾಲಮೂಡ, ಬೈಬಲ್ ಹಿಡಿದು ವೇದ,ಉಪನಿಷತ್ ಒಡಲ ಬಗೆದು ,
ಪ್ರತಿಯೊಂದು ಧರ್ಮಗ್ರಂಥಗಳ ಒಳಹೊಕ್ಕು, ವೈಜ್ನಾನಿಕ ನಿಯತಕಾಲಿಕೆಗಳನ್ನು ತೂಕ ಮಾಡಿ
ನೋಡಿ, ಮನೋವಿಜ್ಞಾನ, ಮನಃಶಾಸ್ತ್ರದ ಒಳಗಿನರಿಮೆ ಅರಿದು. ಪ್ರಖರ ವೈದ್ಯಕೀಯ ನೋಟಗಳಾಚೆ
ಹೊಳಪು ಕಂಗಳಿಂದ ವಿವೇಚಿಸಿ -ಅನೂಚಾನವಾಗಿ ಬಂದ-ನ್ಯಾಯ, ಸಂಪ್ರದಾಯ, ಪದ್ದತಿ, ಸಂಸೃತಿಯ
ಅಂತರ್ಗತಗಳನ್ನರಿತಿದ್ದಾನೆ. ನಿರಂಕುಶ ಮೂಢನಂಬಿಕೆ ಅಲ್ಲಗೆಳೆದು ಸತ್ಯವನ್ನು ಸುಳ್ಳಿನ
ಕಬಂಧ ಬಾಹುವಿನಿಂದ ಸೆಳೆದು ಬೇರ್ಪಡಿಸಿದ್ದಾನೆ.
ಇತ್ಯಾತ್ಮಕ ನೇತ್ಯಾತ್ಮಕ ವಿಷಯಗಳನ್ನು ಅರಿತು
ಚಿತ್ತ, ಧ್ಯೇಯದ ಸಿದ್ಧಿ ಗಳಿಸಿದ್ದಾನೆ. ಮನುಷ್ಯನ ಮೂಲ ದ್ರವ್ಯದ ಧಾತು ಯಾವುದೆಂದು
ಅರಿತಿದ್ದಾನೆ. ಭಿನ್ನ ಅಭಿವ್ಯಕ್ತಿ ಸ್ವರೂಪಗಳ ಅನಿವಾರ್ಯತೆ ಮನಗೊಂಡಿದ್ದಾನೆ. ಮಾನವನ
ಎಲ್ಲ ಗುದುಮುರಿ ತರಿದು ಎಸಿದಿದ್ದಾನೆ. ತತ್ವಶಾಸ್ತ್ರದ ಮೂಲಕ ಬದುಕಿನ ಹಸಿಹಸಿ
ಸತ್ಯಗಳನ್ನು, ಅಪರಿಹಾರ್ಯವಾದ ತಥ್ಯಗಳನ್ನು ಅನ್ವೇಷಿಸಿದ್ದಾನೆ. ಆತ್ಮವ್ಯವಸಾಯ ಮಾಡಿ
ಕಳೆ ತೆಗೆದು ಹಾಕಿ ಬೆಳೆ ಬೆಳೆದಿದ್ದಾನೆ. ಭ್ರಾಂತಿಯ ಬೇರ ಒಡೆದು ದೇವನನ್ನೊಲಿಸುವ
ಅಸಂಖ್ಯ ದಾರಿಗಳನ್ನು ಕಂಡುಕೊಂಡಿದ್ದಾನೆ. ಇಲ್ಲಿಯವೆರೆಗಿನ ಮಾನವ ಪ್ರಗತಿಯಯನ್ನು,
ಎಲ್ಲಾ ವಿಕಸನಗಳನ್ನು ಕಡಿದಾದ ಶಿಖರವೆನ್ನುವದಾದರೆ ಆತ ಅದೆಲ್ಲವನ್ನು ಅನಿರ್ವಚನೀಯ
ಮೋಡಿಯಿಂದ ಮೆಟ್ಟಿ ನಿಂತು, ಹಳೆಯ ಪಾದಧೂಳಿಗಳೆಲ್ಲವನ್ನು ಮರುಸ್ಪರ್ಶಿಸಿ, ಮರುಸೃಜಿಸಿ –
ಕನಿಷ್ಟ ವೇಳೆಯಲ್ಲಿ ಗರಿಷ್ಟವೇಗದಲ್ಲಿ ಬೆಟ್ಟದ ತುಟ್ಟತುದಿ ತಲುಪಿ ಇದೀಗ ಒಂದು
ನಿಡಿದಾದ ನಿಸೂರಿನ ಭಾವದಿಂದ ತಲೆ ಎತ್ತಿ ನೋಡಿದ್ದಾನೆ -ಎಲ್ಲಾ ದೊರೆತಾದ ಮೇಲೆ ಬರುವ
ನಿತಾಂತವಾದ ಕ್ಷೆಭೆಯಿಂದ. ಆಗ ಕಾಣಿಸಿದೆ ಶಿಖರದ ನೆತ್ತಿಯ ಮೇಲೆ ಸುಡು ಸುಡುವ ಸೂರ್ಯ.
ಕೊಟ್ಟ ಕೊನೆಯ, ಉಕ್ಕಡದ ಆ ತುತ್ತ ತುದಿಯ ಮೊಣಚು ಕಲ್ಲಿನ ನೆತ್ತಿಯ ಮೇಲೆ ತನ್ನ ಎಡಗಾಲು
ಊರಿ ಕೆಳಗೆ ಬಾಗಿ ನೋಡಿದ್ದಾನೆ – ಆ ನೇಸರನಡಿಯಲ್ಲಿ ಕಣ್ಣಿಗೆ ರಾಚುವಂತೆ ಅಗಲಗಲ ಜಗದಗಲ
ಲಿಪಿಯಲ್ಲಿ, ಸ್ಪಸ್ಟವಾಗಿ, ನಿಷ್ಕಳಂಕವಾದ, ಯಾವದೇ ಸಂದೇಹಕ್ಕನಿತೂ ಆಸ್ಪದವಿಲ್ಲದಂತೆ
ಒಡಮೂಡಿದ ಅಕ್ಷರಗಳಿವು – ‘ಕೃತ್ರಿಮ’.
ನಾವು ಕೊನೆಮೊದಲಿಲ್ಲದಂತೆ ಕಾಣುವ ವರ್ತುಲ
ಬೆಟ್ಟದ ಕೊಟ್ಟ ಕೊನೆಯನ್ನು ಅರಿಸುತ್ತ ಕೃತಕ ಕಲ್ಲಿನ ಮೇಲೆ ಕಾಲು ಚಾಚಿ ಆಯಾಸದಿಂದ
ಕುಳಿತ್ತಿದ್ದೇವೇನೋ ಅನಿಸುತ್ತದೆ ನನಗೆ. ಪಾವಕ ಕಾಣುವದಕ್ಕಾಗಿ ಶಿಲೆಯ ಹುಡುಕಾಟ, ಕವಿತೆ
ಬರೆಯುವದಕ್ಕಾಗಿ ಅನುಭವದ ತಿರುಗಾಟ, ಫೆಸಬುಕ್ಕನ ಗೋಡೆಯ ಮೇಲೆ ಸದ್ಯದ ಪ್ರಾಮುಖ್ಯ
ಸಮಾಚಾರ ಅವ್ಯತನಗೊಳಿಸಲು ನೆನೆಪುಗಳ ಪುನರ್ಪರಿಶೀಲನೆ. ಇದೀಗ ತೋರಿಸಬೇಕೆಂದೆ
ನಿರ್ಮಿಸುತ್ತಿರುವ ಬ್ರೆಕಿಂಗ ವಾರ್ತೆಯ ತುಂಡುಗಳು. ಸರೀಕರನ್ನು ದಂಗು ಬಡಿಸಲೆಂದೇ
ಪ್ರಕಟಿಸುವ ಆವಿಷ್ಕಾರಗಳು, ತಮ್ಮ ಹೊಳಹುಗಳನ್ನು ಬೆಳಗಿಸಲೆಂದೆ ಮಾಡುತ್ತಿರುವ
ವೈಜ್ನಾನಿಕ ಸಂಶೋಧನೆ,ಅನ್ವೇಷಣ, ಗವೇಷಣಗಳು. ಎಲ್ಲರೂ ರೂಪದರ್ಶಿಗಳೆ, ಕಲಾವಿದರೆ, ಸದಾ
ಅನುಕರಣೀಯರೆ. ಅಮೂರ್ತವದದ್ದನ್ನು, ಹೇಳಲಾಗದ್ದನ್ನು, ಹೇಳಬಾರದನ್ನು ತಿಳಿ ಹೇಳುವ
ಕೈಪಿಡಿಗಳ ರಾಶಿ ರಾಶಿ ಗುಚ್ಚಗಳು. ಎಲ್ಲರಿಗೂ, ಎಲ್ಲವನ್ನೂ ಹಿಡಿದಿಡುವ ಆದಮ್ಯ ಬಯಕೆ.
ಅದನ್ನು ಎಲ್ಲರೆದುರಿಗೆ ಬಿಚ್ಚಿಡಬೇಕೆಂಬ ಚಟ, ತನಗೆ ಕಾಣದ್ದು, ತಾ ನೋಡದ್ದು ಅಸತ್ಯವೆಂಬ
ಅಖಂಡ ನಂಬುಗೆ ಇದರ ಬುನಾದಿ. ಸಾಮೂಹಿಕ ತಳಮನಸ್ಸಿನಲ್ಲಡಗಿರುವ ಭೀತಿಗೆ ಭಿತ್ತಿಯನ್ನು
ಎತ್ತಿ ಕೊಟ್ಟಂತೆ, ಗರಬಡಿದು ತಿನ್ನುವ ಆಳದ ಪಾಪಪ್ರಜ್ಞೆ – ಸ್ವಕೇಂದ್ರಿತ ಅಹಂಕಾರ –
ಅದೇ ಸೃಜನಶೀಲತೆ ಎಂಬ ಅಹಂ. ಇದರ ಆಯಾಮಗಳು ಅನೇಕ, ಪರಿಣಾಮಗಳು ಘನಘೋರ – ಯಾವದನ್ನೋ
ಉಳಿಸಿಕೊಳ್ಳಲು ಹೋಗಿ ಮುಖ್ಯವಾದದ್ದನ್ನೆ ಮರೆತುಬಿಡುವ ಪ್ರವೃತ್ತಿ.
ಆಳ ಅರಿಯುವದಕ್ಕಾಗಿಯೇ ಎಸೆಯುತ್ತಿರುವ ಕಲ್ಲೆಂದ
ಮೇಲೆ ತಪ್ಪೆಂದು ಹೇಳುವವ ಮೂರ್ಖ ಶಿಖಾಮಣಿ. ಮೂರು ಲೋಕ ಕಂಡವನ ಭುಜಬಲದ ಪರಾಕ್ರಮ
ನೀನಗೇನು ತಿಳಿದಿದೆಯೋ ಎಂಬ ಠೇಂಕಾರ. ಅಬ್ಬರಿಸಿ ಬೊಬ್ಬಿಡುತ್ತಿರುವ ಮಾಧ್ಯಮ, ಮಧ್ಯಮ
ಪಾಂಡವನ ಅಪರಾವತಾರವೆ. ಮದುವೆ ಎನ್ನುವದು ಗಂಡು ಹೆಣ್ಣಿನ ನಡುವಿನದೊಂದು ಸಾಂಸ್ಕೃತಿಕ
ಆಯಾಮವೆಂದಾದರೆ ಈ LGBT (ಎಲ್ಜಿಬಿಟಿ) ಎಂಬುವದು ತೋರ್ಪಡಿಕೆಯ ಇನ್ನೊಂದು ಮಗ್ಗುಲೇನೋ?
ಇವರಿಗಿರುವ ಸಧ್ಯದ ಒಂದೆ ಒಂದು ಎಲ್ಜಿಬಿಲಿಟಿ ಎಂದರೆ ಸಂತಾನೋತ್ಪತ್ತಿ ಮಾಡಲಾಗದ್ದೋ
ಏನೋ? ಜನಸಂಖ್ಯೆ ನಿಯಂತ್ರಿಸಲು ಪ್ರಕೃತಿ ಹೇರುತ್ತಿರುವ ನಿರ್ಬಂಧವೇನೋ ಇದು. ಪ್ರಾಯಶ
ಅದೇ ಸಧ್ಯದ ಸುದೈವವೋ?
Monday, January 6, 2014
ಸೀತಾ-ಬರೆದೆ ನೀನು ನಿನ್ನ ಹೆಸರ
ಸೀತಾ
ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೊ ಏನೊ
ನನ್ನ ಮನದ ಗುಡಿಯಲಿ||
ಮಿಡಿದೆ ನೀನು ಪ್ರಣಯ ನಾದ
ಹೃದಯ ವೀಣೆ ಅದರಲಿ
ಬೆರೆತು ಹೂದೆ ಮರೆತು ನಿಂತೆ
ಅದರ ಮಧುರ ಸ್ವರದಲಿ||
ಕಂಗಳಲ್ಲಿ ಕವನ ಬರೆದು
ಕಳಿಸಿದೆ ನೀ ಇಲ್ಲಿಗೆ
ಅಂಗಳದೆ ಅರಳಿತಾಗ
ನನ್ನ ಒಲವ ಮಲ್ಲಿಗೆ||
ನಿನ್ನ ನಗೆಯ ಬಲೆಯ ಬೀಸಿ
ಹಿಡಿದೆ ನನ್ನ ಜಾಲದೆ
ಬಂಧಿಸಿದೆ ನನ್ನನಿಂದು
ನಿನ್ನ ಪ್ರೇಮ ಪಾಶದೆ||
ಬರೆದೆ ನೀನು ನಿನ್ನ ಹೆಸರ
ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೊ ಏನೊ
ನನ್ನ ಮನದ ಗುಡಿಯಲಿ||
ಮಿಡಿದೆ ನೀನು ಪ್ರಣಯ ನಾದ
ಹೃದಯ ವೀಣೆ ಅದರಲಿ
ಬೆರೆತು ಹೂದೆ ಮರೆತು ನಿಂತೆ
ಅದರ ಮಧುರ ಸ್ವರದಲಿ||
ಕಂಗಳಲ್ಲಿ ಕವನ ಬರೆದು
ಕಳಿಸಿದೆ ನೀ ಇಲ್ಲಿಗೆ
ಅಂಗಳದೆ ಅರಳಿತಾಗ
ನನ್ನ ಒಲವ ಮಲ್ಲಿಗೆ||
ನಿನ್ನ ನಗೆಯ ಬಲೆಯ ಬೀಸಿ
ಹಿಡಿದೆ ನನ್ನ ಜಾಲದೆ
ಬಂಧಿಸಿದೆ ನನ್ನನಿಂದು
ನಿನ್ನ ಪ್ರೇಮ ಪಾಶದೆ||
ಬರೆದೆ ನೀನು ನಿನ್ನ ಹೆಸರ
ಕಸ್ತೂರಿ ನಿವಾಸ - ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ಕಸ್ತೂರಿ ನಿವಾಸ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ
ವಾಸಂತಿ ನಲಿದಾಗ
ವಾಸಂತಿ ನಲಿದಾಗ ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋಕಾಗ ಮನವೆರಡು ಬೆರೆತಾಗ
ಮಿಡಿದಂತ ಹೊಸರಾಗ ಅದುವೆ ಅನುರಾಗ... ಬಾರಾ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ
ಜೇನಂಥ ಮಾತಲ್ಲಿ
ಜೇನಂಥ ಮಾತಲ್ಲಿ ಕುಡಿಗಣ್ಣ ಸಂಚಲ್ಲಿ
ನಗುವೆಂಬ ಹೂಚಲ್ಲಿ ನಿಂತೆ ನೀ ಮನದಲ್ಲಿ
ಯೆದುರಾದೆ ಹಗಲಲ್ಲಿ ಮರೆಯಾದೆ ಇರುಳಲ್ಲಿ
ನೀ ತಂದ ನೋವಿಗೆ ಕೊನೆಯಲ್ಲಿ ಮೊದಲೆಲ್ಲಿ
ಬಲು ದೂರ ನೀ ಹೋಗೆ ನಾ ತಾಳೆ ಈ ಬೇಗೆ
ಬಾ ಬಾರೆ ಚೆಲುವೆ ಬಾರೆ ಒಲವೆ ...ಬಾರಾ
ಬಾಳೆಂಬ ಪಥದಲ್ಲಿ
ಬಾಳೆಂಬ ಪಥದಲ್ಲಿ ಒಲವೆಂಬ ರಥದಲ್ಲಿ
ಕನಸೆಲ್ಲ ನನಸಾಗಿ ನನಸೆಲ್ಲ ಸೊಗಸಾಗಿ
ಯುಗವೊಂದು ದಿನವಾಗಿ ದಿನವೊಂದು ಚಣವಾಗಿ
ನಮ್ಮಾಸೆ ಹೂವಾಗಿ ಇಂಪಾದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ
ಎಂದೆಂದು ಜೊತೆಯಾಗಿ ನಡೆವಾ ಒಂದಾಗಿ ಬಾರಾ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ
ವಾಸಂತಿ ನಲಿದಾಗ
ವಾಸಂತಿ ನಲಿದಾಗ ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋಕಾಗ ಮನವೆರಡು ಬೆರೆತಾಗ
ಮಿಡಿದಂತ ಹೊಸರಾಗ ಅದುವೆ ಅನುರಾಗ... ಬಾರಾ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ
ಜೇನಂಥ ಮಾತಲ್ಲಿ
ಜೇನಂಥ ಮಾತಲ್ಲಿ ಕುಡಿಗಣ್ಣ ಸಂಚಲ್ಲಿ
ನಗುವೆಂಬ ಹೂಚಲ್ಲಿ ನಿಂತೆ ನೀ ಮನದಲ್ಲಿ
ಯೆದುರಾದೆ ಹಗಲಲ್ಲಿ ಮರೆಯಾದೆ ಇರುಳಲ್ಲಿ
ನೀ ತಂದ ನೋವಿಗೆ ಕೊನೆಯಲ್ಲಿ ಮೊದಲೆಲ್ಲಿ
ಬಲು ದೂರ ನೀ ಹೋಗೆ ನಾ ತಾಳೆ ಈ ಬೇಗೆ
ಬಾ ಬಾರೆ ಚೆಲುವೆ ಬಾರೆ ಒಲವೆ ...ಬಾರಾ
ಬಾಳೆಂಬ ಪಥದಲ್ಲಿ
ಬಾಳೆಂಬ ಪಥದಲ್ಲಿ ಒಲವೆಂಬ ರಥದಲ್ಲಿ
ಕನಸೆಲ್ಲ ನನಸಾಗಿ ನನಸೆಲ್ಲ ಸೊಗಸಾಗಿ
ಯುಗವೊಂದು ದಿನವಾಗಿ ದಿನವೊಂದು ಚಣವಾಗಿ
ನಮ್ಮಾಸೆ ಹೂವಾಗಿ ಇಂಪಾದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ
ಎಂದೆಂದು ಜೊತೆಯಾಗಿ ನಡೆವಾ ಒಂದಾಗಿ ಬಾರಾ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ ಸೋತೆ ನಾನಾಗ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
Subscribe to:
Posts (Atom)