ಸೀತಾ
ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೊ ಏನೊ
ನನ್ನ ಮನದ ಗುಡಿಯಲಿ||
ಮಿಡಿದೆ ನೀನು ಪ್ರಣಯ ನಾದ
ಹೃದಯ ವೀಣೆ ಅದರಲಿ
ಬೆರೆತು ಹೂದೆ ಮರೆತು ನಿಂತೆ
ಅದರ ಮಧುರ ಸ್ವರದಲಿ||
ಕಂಗಳಲ್ಲಿ ಕವನ ಬರೆದು
ಕಳಿಸಿದೆ ನೀ ಇಲ್ಲಿಗೆ
ಅಂಗಳದೆ ಅರಳಿತಾಗ
ನನ್ನ ಒಲವ ಮಲ್ಲಿಗೆ||
ನಿನ್ನ ನಗೆಯ ಬಲೆಯ ಬೀಸಿ
ಹಿಡಿದೆ ನನ್ನ ಜಾಲದೆ
ಬಂಧಿಸಿದೆ ನನ್ನನಿಂದು
ನಿನ್ನ ಪ್ರೇಮ ಪಾಶದೆ||
ಬರೆದೆ ನೀನು ನಿನ್ನ ಹೆಸರ
ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೊ ಏನೊ
ನನ್ನ ಮನದ ಗುಡಿಯಲಿ||
ಮಿಡಿದೆ ನೀನು ಪ್ರಣಯ ನಾದ
ಹೃದಯ ವೀಣೆ ಅದರಲಿ
ಬೆರೆತು ಹೂದೆ ಮರೆತು ನಿಂತೆ
ಅದರ ಮಧುರ ಸ್ವರದಲಿ||
ಕಂಗಳಲ್ಲಿ ಕವನ ಬರೆದು
ಕಳಿಸಿದೆ ನೀ ಇಲ್ಲಿಗೆ
ಅಂಗಳದೆ ಅರಳಿತಾಗ
ನನ್ನ ಒಲವ ಮಲ್ಲಿಗೆ||
ನಿನ್ನ ನಗೆಯ ಬಲೆಯ ಬೀಸಿ
ಹಿಡಿದೆ ನನ್ನ ಜಾಲದೆ
ಬಂಧಿಸಿದೆ ನನ್ನನಿಂದು
ನಿನ್ನ ಪ್ರೇಮ ಪಾಶದೆ||
ಬರೆದೆ ನೀನು ನಿನ್ನ ಹೆಸರ
2 comments:
`ಕೋರಾ ಕಾಗಜ ಥಾ ಯೇ ಮನ್ ಮೇರಾ’ ಎನ್ನುವ ಗೀತೆಯಿಂದ ಈ ಗೀತೆಗೆ ಪ್ರೇರಣೆ ಸಿಕ್ಕಿರಬಹುದೆ?
ಸುನಾಥ ಅವರೆ
ನನಗೂ ಹಾಗೆ ಅನಿಸಿತ್ತು , ಇಂಥವೆ ಅನೇಕ ಗೀತೆಗಳು ಹಿಂದಿಯಲ್ಲಿ (ಮೂಲ?) ಇವೆ -- ಆದರೂ ಕನ್ನಡದ ಗೀತೆಗಳಷ್ಟು ಖುಶಿ ಅವ್ಯಾಕೊ ಕೊಡುವದಿಲ್ಲ -it is like listening to country songs v/s ಭಾವಗೀತೆ
Post a Comment