ಅನಿಲ್ ತಾಳಿಕೋಟಿ ಅನುವಾದಿಸಿದ ನೆರೂದಾ ಕವಿತೆ ![]() |
||||
ಮಂಗಳವಾರ, 26 ಫೆಬ್ರವರಿ 2013 (00:00 IST)
|
||||
ಮರೆತೆಯಾದರೆ ನನ್ನ ಮಾತೊಂದ ನಿನಗೆ ತಿಳಿಸುವೆನು ನೋಡು. ಶರತ್ಕಾಲದ ಸಂಜೆಯಲಿ ನನ್ನೆದೆಯ ಕವಾಟದಾಚೆಯಲಿ ಚಾಚಿದ ಕೊಂಬೆಯ ಮರೆಯಲಿ ಮಿಂಚಿದ ಚಂದ್ರನ ತುಣಕ ನೋಡುತ ನಾ ಚಾಚಿದ ಕೈ - ನುಣ್ಣನೆಯ ಬೂದಿಯ ಸವರಿ, ಸುಕ್ಕು ಸುಕ್ಕಾದ ಕೊರಡ ಮೀಟಿ, ಸುಳಿ ಸುಳಿಯಾಗಿ ಸಾಗಿಹದು ನಿನ್ನೆಡೆಗೆ ಇಲ್ಲಿರುವ ಎಲ್ಲಾ ಚರಾಚರ ಸುಗಂಧದ ಬೆಳಗುಗಳು ನಾ ನಿನ್ನಲ್ಲಿಗೆ ತೇಲಿಬರಲು ಬಿಟ್ಟ ಹಾಯಿದೋಣಿಗಳು. ಆದರೀಗ, ಅಣು ಅಣುವಾಗಿ ನೀ ಮರೆತರೆ ನನ್ನ ಮರೆತಂತೆ ನಾ ನಿನ್ನ ತೃಣ ತೃಣವಾಗಿ. ನಿನೊಮ್ಮೇ ಕಡೆಗಣಿಸೆ ನನ್ನ ಎಣಿಸಬೇಡಾ, ಏನನ್ನ ಕಾಯಲಾರೆ ನಿನಗಾಗಿ ನಾ, ಇನ್ನ. ನನ್ನ ಭಿತ್ತಿಯ ಉದ್ದಗಲಗಳ ನಿ ಸುತ್ತಿ, ಸುತ್ತಿ ಮಡಚಿಟ್ಟು, ಹೊರಟೇ ಹೋಗಿ ಬಿಡುವೆಯಾದರೆ ನೆನಪಿರಲಿ - ನೀ ಬಿಟ್ಟ ಮರುಕ್ಷಣವೇ ನಾ ಬೈರಾಗಿ ಕೈ ಚೆಲ್ಲಿ ಹೊರಟು ಬಿಡುವೆ ಹುಡುಕಿ ಮತ್ತೊಂದು ನಲ್ಮೆಯ ನೆಲಯ. ಒಂದು ವೇಳೆ, ನಿನೆನಾದರೂ ಪ್ರತಿ ಕ್ಷಣ , ಪ್ರತಿ ಘಳಿಗೆ, ದಿನ ದಿನ ತಣಿಸಲಾಗದ ತೃಷೆಯಿಂದ ನಾನೇ ನಿನ್ನ ನಿಯತಿ ಎಂದಾದರೆ, ನನ್ನುಸಿರಿನ ಘಮಲು ನಿನ್ನೆದೆಯಲಿ ಪಾರಿಜಾತದ ಪರಿಮಳವಾಗಿ ತೇಲಿ ನನ್ನ ಅಂಗಾಂಗಗಳ ಮೆದುವಾಗಿ ಮೀಟಿ ಎಂದೆಂದೂ ಮರೆಯದ, ಅಳಕಿಸಲಾಗದ ರಾಗಾನುರಾಗವಾಗಿ ಮರುಕಳಿಸಿ, ನನ್ನೊಲುಮೆ ನಿನ್ನ ಪ್ರೇಮ ಹೀರಿ ಬಂಧಿಯಾಗುವದು ನಿನ್ನ ಬಾಹುಗಳಲಿ ನನ್ನಲಿರುತ್ತಲೇ ನನ್ನನುರಕ್ತಿ. (ಪ್ಯಾಬ್ಲೋ ನೆರೂಡಾ ನ 'ಸಿ ತು ಮಿ ಓಲ್ವಿಡಾಸ' (ಸ್ಪಾನಿಷ) ನ ,'ಇಫ್ ಯು ಫಾರ್ಗೆಟ ಮಿ'(ಇಂಗ್ಲಿಷ್) ನ ಕನ್ನಡ ರೂಪಾಂತರ.). |
Thursday, November 14, 2013
ಮರೆತೆಯಾದರೆ ನನ್ನ
Subscribe to:
Post Comments (Atom)
1 comment:
ಅನಿಲರೆ,
ಪ್ಯಾಬ್ಲೋನ passion ಹಾಗು explosive ಶೈಲಿ ನಿಮ್ಮ ಅನುವಾದದಲ್ಲಿ ಯಥಾರ್ಥವಾಗಿ ರೂಪುಗೊಂಡಿವೆ. ಅಬಿನಂದನೆಗಳು.
Post a Comment