
ತೂರಿದೆನೊಂದು ಬಾಣವ ಗಾಳಿಯಲಿ
ಬಿತ್ತದು ಭುವಿಗೆ ನನಗರಿವಿಲ್ಲದಲಿ
ಮಿಂಚಿನ ವೇಗದ ಚಲನೆ ಸಾಧ್ಯವೆ ನೋಡಲು ಎನಗೆ
ಗುಣುಗುಣಿಸಿದೆನೊಂದು ಗೀತೆಯ ಗಾಳಿಯಲಿ
ಹೊಯ್ತದು ನಭಕೆ ನನಗರಿವಿಲ್ಲದಲಿ
ತರಂಗದ ಕಂಪನದ ಬೆರಗು ನಾ ಹಿಡಿದಿಡಲಾಗದದರ ಹರವು
ಎಂದೋ ಮುಂದೊಮ್ಮೆ ಮಾವಿನ ಮರದಲಿ
ಕಂಡೆನಾ ಬಾಣವ ಮೊದಲಿದ್ದ ರೂಪದಲಿ
ನನ್ನ ಗೀತೆಯೋ, ತೇಲುತಿರುವದಲ್ಲಿ ಅದೇ ರಾಗದಲ್ಲಿ ಮಿತ್ರನ ಹೃದಯದಲಿ
ಮೂಲ - Henry Wadsworth Longfellow
ಅನುವಾದ - ಅನಿಲ ತಾಳಿಕೋಟಿ
2 comments:
ಅನಿಲರೆ,
ಮನಸ್ಸನ್ನು ವಿಚಲಿತಗೊಳಿಸುವ ಕವನವೊಂದನ್ನು ಕೊಟ್ಟಿದ್ದೀರಿ. Longfellow ಅವರಿಗೆ ಹಾಗು ನಿಮಗೆ ಧನ್ಯವಾದಗಳು.
ಸುನಾಥ ಕಾಕಾ
ಧನ್ಯವಾದಗಳು
-ಅನಿಲ
Post a Comment