Wednesday, March 7, 2012

ಬೇಡೆನೆಗೆ ಅದರ ಗೊಡವೆ

ಕೆಂಡಸಂಪಿಗೆಯಲ್ಲಿ ಪ್ರಕಟಿತ - ೧೭ ಮೇ ೨೦೧೧
(http://www.kendasampige.com/article.php?id=೪೪೧೨)
ಅನಿಲ ತಾಳಿಕೋಟಿ ಬರೆದ ದಿನದ ಕವಿತೆ




ಪೋರ ಪೋರಿ
ಆಡುತಿಹರು ಲಗೋರಿ
ಬಿಳಿಸುವದೆಲ್ಲ ಎತ್ತಿಡುವದಕ್ಕೆ
ಬಿದ್ದರೂ ಗೆದ್ದರೂ ಬಸಿಯುವ ಬೆವರು

ತೆರೆದ ಹು ಬಾಯಿ
ಒಳಹೊಕ್ಕ ಸಿಪಾಯಿ
ಇಲ್ಲ ಹೊರ ಬರುವ ಇರಾದೇ
ಸಂಗಮದ ನದಿ ಮುಚ್ಚಿಹೋದ ಬದಿ

ಒಳ ಹೊರಗೆ ಹೊರ ಒಳಗೆ
ತಿರಗುವ ಜ್ಯಾಮಿತಿಯ ಪರಿ
ಬಿಸಿಲೋ ಮಳೆಯೋ ಬೇಕಿಲ್ಲ ತಿಳಿ
ಕರಗುವದು ಮಿಯಿಯುದು ಎಲ್ಲ ಒಂದೇ

ಒಂದನೊಂದು ಹೀರಿ
ಗರಿಗೆದುರವ ಮರ ಬೆಳೆದದ್ದು
ಕೆಳಗಿಂದ ಮೇಲೋ ಕೇಂದ್ರದಿಂದ ಪರಿಧಿಗೋ
ಎಲ್ಲದರ ಗುರಿ ಒಂದೇ ಹೀರು ತಿರುವಿ ಬೀರು

ಅಳಕ್ಕಿಳಿಯುವ ಕಿಡಿ
ಅದಕಿಲ್ಲ ಮುಳುಗುವ ದಿಗಿಲು
ಒಳಹೊಕ್ಕಸ್ಟು ಹೊರಬರದಿರುವ ಕೋರು
ಬೆಳಕೆಂದು ಬಂದ ದಾರಿಗೆ ಮರುಗದು ಮರಳದು

2 comments:

sunaath said...

ಸಾಕು ಈ ಲಗೋರಿ
ಇದರಲ್ಲಿ ಜಾರಿ ಜಾರಿ
ತಲುಪುವೆವು ಕೊನೆಗೆ ಗೋರಿ!

Anil Talikoti said...

ಸುನಾಥ ಕಾಕಾ,
ಉತ್ತರದ ಧಾಟಿ ತುಂಬಾ ಹಿಡಿಸಿತು.
ಪ್ರಕೃತಿ ನಿಯಮಕ್ಕೆ ತಲೆ ಬಾಗದೆ ಇರಲಾದಿತೇ?
ಧನ್ಯವಾದಗಳು.
-ಅನಿಲ