ಕೆಂಡಸಂಪಿಗೆಯಲ್ಲಿ ಪ್ರಕಟಿತ - ಜೂನ್ 2011
(http://www.kendasampige.com/article.php?id=4487)
ಮರ್ಟಲ್ ಮತ್ತು ಮೆಹಬೂಬಾ:ಅನಿಲ್ ತಾಳಿಕೋಟಿ ಲಹರಿ
ಅನಿಲ ತಾಳಿಕೋಟಿ
ಬುಧವಾರ, 15 ಜೂನ್ 2011 (04:20 IST)
ವಾರದ ಹಿಂದೆ ಮನೆಯೆದರು ಬೇಡ ಬೇಡವೆಂದರು ಬೆಳದೆ ಬೆಳೆಯುತ್ತಿದ್ದ ಕ್ರೆಪ ಮರ್ಟಲಗೆ ಮೆಚ್ಚು ಹಚ್ಚಿದ್ದೆ. ತಿಂಗಳಿಂದಲೆ ಅದನ್ನು ಕಿತ್ತೆಸೆಯಿರಿ ಎಂದಿದ್ದಳು ನನ್ನ ಮೆಹಬೂಬಾ. ಫ಼ೌಂಡೆಶನಗೆ ತುಂಬಾ ಹತ್ತಿರವಂತೆ ಅದು. ಹಳೆಯ ಹೊಂಡಾವನ್ನೆ ಹತ್ತು ವರುಷದಿಂದ ಹೋರಾಡುತ್ತ ಓಡಿಸುತ್ತಿರುವ ನಾನು, ‘ಕಿತ್ತಿ ಎಸೆಯಲ್ಲಾ, ಎತ್ತಿ ಬೆರೆಡೆಗೆ ಹಚ್ಚುವೆ, ರಿ ಸಾಯಕಲ್ ಮಾಡುವೆ’ ಎಂದೆ. ಎಂದಿನಂತೆ, ಹೇಳುವದು ಹೆಜ್ಜೇನಾದರೆ, ಮಾಡುವದು ಸಕ್ಕರೆ ಬೇನೆ. ಒಂದೆರಡು ಚದರಡಿ ಮರದ ಸುತ್ತ ಕೊರೆದೆ. ಒಂದೇ, ಎರಡೇ ಬೇರು? ಅದು ರಕ್ತ ಬೀಜಾಸುರನಂತಹದು. ಒಂದರೊಳಗೊಂದು ಹೊಕ್ಕು, ಕೊನೆ ಮೊದಲಿಲ್ಲದ ಜಾಲ. ಶೂ, ಶೊವೆಲ ಬದಲಿಸಿದ್ದಾಯಿತು, ಒಂದು ರೌಂಡು ಗೆಟೊರೆಡ ಹಿರಿದ್ದಾಯಿತು, ಕೇಳುತ್ತಿದ್ದ ಹಾಡುಗಳು ಮುಗಿಯುತ್ತ ಬಂದರು ಇನ್ನು ಅಲುಗಾಡುತ್ತಲಿಲ್ಲ ಮರ್ಟಲು. ಮೆಕ್ಸಿಕನ್ನಗೆ ಮುವತ್ತು ನಿಮಿಷ ತಗೊಳ್ಳುವದು ಈ ಭಾರತಿಯನಿಗೆ ಮೂರು ಘಂಟೆ ಕೊರೆದರೂ, ಬಡೆದರೂ ಮುಗಿಯಲೊಲ್ಲದು. ಮಂಡೆ ಬಿಸಿಯಾಯಿತು. ಕೈಗೆ ಪಾವರ ಟ್ರಿಮ್ಮರ್ ಬಂದಿತು. ಎಲ್ಲೆಲ್ಲಿ ಬೇರಿತ್ತೊ ಅಲ್ಲೆಲ್ಲಾ ಕ್ಷಣದಲ್ಲೆ ಬಿರುಕಾಯಿತು. ಕ್ಲಿಪ್ಪರ್ರು, ಸಿಜ಼ರ್ರು, ಟ್ರಿಮ್ಮರ್ರು ಜೊತೆಗೆ ಅಮ್ಮಾವ್ರು ಸೇರಿ ಕ್ರೆಪ ಮರ್ಟಲ ಮೈಗ್ರೆಟ ಆಗಲು ರೆಡಿ ಆಯಿತು. ತಳ್ಳಾಡಿ ಹಿಂದೆ ಸಾಗಿಸಿದ್ದಾಯಿತು. ಹೊಂಡ ಮೊದಲೆ ತೋಡಿಯಾಗಿತ್ತು. ಟನ್ನು ಮಣ್ಣು ಸುರಿದು ಗಿಡ ಮಡುಗಿದೆ. ಅಂದೆ ಮಳೆ ಬರುವ ಲಕ್ಷಣವಿದ್ದಿದ್ದರಿಂದ ಗ್ಯಾರಂಟಿ ವಾಪಸ ಚಿಗಿಯುತ್ತದೆ ಎಂದೆ, ಸರ್ಟಿಫ಼ೈಡ ಗಾರ್ಡನರನಂತೆ.
ವಾರದ ನಂತರ ನೋಡಿದರೆ ಕ್ರೆಪ ಮರ್ಟಲ ಬಾಡಿ ಬಡವಾಗಿತ್ತು. "didn't come didn't bang" (ಬಂದಿದ್ದಲ್ಲ, ಬಾರಿಸಿದ್ದಲ್ಲ) ಯಾರೊ ನಂದೆ ಡಯಲಾಗಿಂದ ಕೆಣಕಿದಂತಾಯಿತು.
ಎಲ್ಲಕಿಂತ ಮಿಗಿಲಾದ ದು:ಖ ಆ ಬೇರುಗಳನೆಲ್ಲಾ ಬೇರೆಹಮ್ಮಾಗಿ ಬೆಂಡೆತ್ತಿದ್ದು. ’ಹೋಗಿ ಸ್ವಲ್ಪ ಮಲ್ಚ ತೊಗೊಂಡು ಬಂದು ಸುತ್ತ ಹಾಕಿ, ಹಾಗೆ ಒಂದ್ನಾಲ್ಕು ಮಮ್ಸ ತಂದು ಆ ಕ್ರೆಪ ಮರ್ಟಲ ತೆಗೆದ ಜಾಗದಲ್ಲಿ ಹಾಕಿ" ಆಜ್ಞಾಪಿಸಿದಳು ನನ್ನವಳು. ಮಮ್ಸ ತಂದು ನೆಲಕ್ಕೆ ಬಡಿದದ್ದಾಯಿತು. ಇನ್ನು ಮಲ್ಚ ಸುತ್ತೆಲ್ಲ ಮಲಗಿಸಬೇಕು.
"ಒಂದ್ನಾಲಕ್ಕು ಹಳದಿ ಕುಂಕುಮ, ನವರಾತ್ರಿ ಗೊಂಬೆ ಪೂಜೆ ನೋಡಲಿಕ್ಕುಂಟು, ಬೇಗ ರೆಡಿ ಆಗಿಬಿಡ್ರಿ" ನನ್ನವಳ ಬೇಡಿಕೆ. ಬೇಡಿಕೆ ಹೋಗಿ ಆಜ್ಞೆಯಾಗುವ ಮುಂಚೆ ಪೊರೈಸುವದು ಅನುಭವ ಕಲಿಸುವ ಪಾಠ. ವಿಕೆಂಡ ಬಂದರೆ ನಾನೊಬ್ಬ ವಾರಿಯರ, ಕೈಯಲ್ಲಿ ಶೊವೆಲ್ಲು ತಪ್ಪಿದರೆ ಸ್ಟಿರಿಂಗು. "ಪ್ರತಿ ದಿನ ನಿರ್ವಾಹವಿಲ್ಲಾ ನಾನೆ ಓಡಿಸಬೆಕು, ವಿಕೆಂಡ ಮಾತ್ರ ನೀನು ಓಡಿಸಲೆಬೇಕು ಕಾರು" ಅದು ನಮ್ಮ ಕರಾರು. ಶನಿ-ರವಿ ನಾನೆ ಶ್ವೊಫ಼ರ್ರು(chauffeur). ಮೆತ್ತಗೆ ಮಲ್ಚ ಮಡಗಿದೆ.
ಯಾಕಪ್ಪಾ ಇಷ್ಟೊಂದು ಕಷ್ಟಪಡತಾರೆ ಈ ಕನ್ನಡಿಗರು, ಪ್ರತಿ ವರುಷ ಐದು ಪೈಸಾ ಉತ್ಪನ್ನವಿಲ್ಲದ ಕೆಲಸ ಈ ಗೊಂಬೆ ಕೂಡಿಸುವದು ಎಂದುಕೊಂಡೆ. ಬಡ ಮರ್ಟಲನ್ನು ಮರ್ಡರ ಮಾಡಿದ ನೆನಪು ಇನ್ನು ಕೊರೆಯುತಿತ್ತು. "ನೀವು ನೋಡಿದ್ದೆ ಕ್ರಿಕೆಟ್ಟು ಸಾವಿರ ಸಾರಿ ನೊಡಲ್ವ?" ಅವಳು ಎನ್ನುವದು, ನಾನು "ಮುಂಜ ಮುಂಜಾನೆ ಎದ್ದು ಕಂಡ ಕಂಡವರ ಮದುವೆ ನೋಡುವದಕ್ಕಿಂತ ಅದು ಬೆಟ್ಟರ್ರು" ಎನ್ನುವದು, ಪಕ್ಕದಿಂದ ಆರು ವರುಷದ ಮಗ "ಶ್, ಶ್ ಐ ಯಾಮ ವಾಚಿಂಗ ಹಿಯರ್" ಪ್ರತಿವಾರದ ವರಾತಾ ಯಾಕೋ ಇವತ್ತು ಬೇಡಾ ಎನಿಸಿತು. ಗೊಂಬೆ ನೋಡಿದ ಮೇಲೆ ಜ್ಞಾನೋದಯವಾಯಿತು. ನೂರು ದಿನಗಳಿಂದ ಮಕ್ಕಳಿಗೆ ಹೇಳಬೇಕೆಂದಿದ್ದ ರಾಮಾಯಣ, ಮಹಾಭಾರತದ ಕಥೆಗಳು ಮೂರೆ ನಿಮಿಷದಲ್ಲಿ ಮಕ್ಕಳಿಗೆ ಮನವರಿಕೆಯಾದವು. ನೂರು ಮಾತುಗಳು ಹೇಳದ್ದನ್ನು ಮೂರು ಬೊಂಬೆ ಥೀಮುಗಳು ಮನದಟ್ಟಾಗಿಸುತ್ತವೆ. ವಿಲನ ರಾವಣ, ದಾಟ ಬ್ಲು ಬಾಯ ಕೃಷ್ಣ, ಮಾಯವಾಗಬಾರದ ರಾಮ ಸೇತುವೆ, ಹೋದ ವರುಷ ನೋಡಿ ಬಂದ ಮೈಸೂರ ಅರಮನೆ, ಕ್ರಿಸ್ತ ನ ಸಹನೆ, ಮುಂದಿನ ತಲೆಮಾರಿನ ಅಮೆರಿಕನ್ನಡಿಗರಿಗೆ ಸಂಸ್ಕೃತಿಯ ಸಿಂಪಲ ಸ್ಯಾಂಪಲ. ಇನ್ನೊಂದು ಮನೆಯಲ್ಲಿ ಎಲ್ಲವು ಬೆಂಗಾಲಿಮಯ. ಮತ್ತೊಂದರಲ್ಲಿ ಕ್ರಿಕೆಟ್ಟು, ದೇಶಭಕ್ತರ, ಕರ್ನಾಟಕದ ಉದ್ದಗಲದ ಮೆಹರುಗಳು, ಗೊಲಗುಂಬಜ, ಮೇಣಬಸದಿ, ಸಂಗಮ, ಹಳೇಬೀಡು, ಗೊಮ್ಮಟನ ನೂರಾರು ರೆಪ್ಲಿಕಾಗಳು.
ಬೀಡುವೆನೆಂದರೂ ಬಿಡಲೊಲ್ಲೆ ಎನ್ನುವ ತಾಯಿಬೇರಿನ ಸೆಳೆತ. ಮಂದ್ರವಾಗಿ ಬರುತ್ತಿರುವ "ಎಲ್ಲಾದರು ಇರು" ಸಂಗೀತ, ಅದಾದ ಮೇಲೆ "ಯಾವ ಮೋಹನ ಮುರಳಿ ಕರೆಯಿತೋ" ಮುಂದುವರಿಯುತಿತ್ತು. ಮಕ್ಕಳು ಬೆರಗಿನಿಂದ ರಾಮ, ಭಾರತ, ಹಂಪಿ, ಮೈಸೊರ ಅರಗಿಸಿಕೊಂಡರೆ ಅದಕ್ಕಿಂತ ಇನ್ನೆಂತಹ ಸಾರ್ಥಕತೆ ಬೇಕು? ಅದಕ್ಕೆ ನಿದರ್ಶನವೊ ಎಂಬಂತೆ ಅನೇಕರ ಮನೆಯಲ್ಲಿ ಹಬ್ಬದ ವಾತಾವರಣ, ವೆಬ್ ಕ್ಯಾಮ್ ನಲ್ಲಿ ಮನೆಯವರೊಂದಿಗೆ ನೇರ ಪ್ರಸಾರದ ಸಂತಸ.
ಮುಗಿಸಿ ಮನೆಗೆ ಬಂದೆ, ನಾನು ಇಳಿಯುವ ಮೊದಲೆ ಕಾರಿನಿಂದ ಧುಮಿಕಿದ ಮಗ ಕಾರಿನ ಬೆಳಕಿನಲ್ಲಿ ನೋಡುತ್ತ ಕೂಗು ಹಾಕಿದ, "ಪಪ್ಪಿ ಮರ್ಟಲ ಹಾಸ್ ಅ ನಿವ್ ಬಡ". ಉಗುರಿಂದ ಬೊಡ್ಡೇ ಗೀರುತ್ತಾ ಚೀರಿದ "ಹಸರ ಅದ". ಬೆಳಗಾಗುವ ವರೆಗೆ ಕಾಯಬೇಕೆನಿಸಲಿಲ್ಲಾ, ಆಗಲೆ ಮಲ್ಚ ಸುರಿಸಿ ಸರಿಮಾಡಿದೆ. ಓಡುತ್ತ ಬಂದ ಮಗ ನೀರೆರೆಯುತ್ತ ಕೇಳಿದ ’ನೆಕ್ಸ್ಟ ಇಯರ್ ನಮ್ಮನೆಲು ಗೊಂಬೆ ಕೂಡಿಸೋಣವಾ?"
Wednesday, March 7, 2012
Subscribe to:
Post Comments (Atom)
2 comments:
ನೆನಪಿನ ಚಿಕ್ಕಿಗಳ ಮಾಲೆಯನ್ನು ಸರಸವಾಗಿ ಪೋಣಿಸಿದ್ದೀರಿ. ಅಭಿನಂದನೆಗಳು.
ಸುನಾಥ ಕಾಕಾ
ಧನ್ಯವಾದಗಳು.
-ಅನಿಲ
Post a Comment