ಕನಿಷ್ಟ ೧೦ ಸಾವಿರದ ಇತಿಹಾಸ ಇರುವ ಅಮೇರಿಕಾದ ಮೂಲನಿವಾಸಿಗಳಿಗೂ, ಭಾರತಿಯ ಬುಡಕಟ್ಟುಗಳಿಗೂ ಇರುವ ಸಾಮ್ಯ ನನ್ನನ್ನು ಯಾವಾಗಲು ಬೆರಗುಗೊಳಿಸುತ್ತದೆ. ಮಾನವ ವಿಕಾಸ ವಿಜ್ಞಾನದ ಮೆಟ್ಟಲುಗಳೆಲ್ಲಾ ಇಂತಹ ಸಾವಿರಾರು ಪಾದ ಧೂಳಿಯಿಂದ ಮುಚ್ಚಿಹೋಗಿವೆ. ಮೂಲನಿವಾಸಿಗಳ ಬಾಳಿನ ಅಧ್ಯಯನ ಬೆರಗುಗೊಳಿಸುವ ಪರಿ ಯಾವುದೇ ವೈಜ್ಞಾನಿಕ ಕಲ್ಪನೆಯಸ್ಟೇ ಅಚ್ಚರಿ ಹುಟ್ಟಿಸುತ್ತದೆ. ಅವರ ಉಗಮ, ಬಳಿಸಿದ ಭಾಷೆ, ನುಡಿಗಟ್ಟು, ಸಾಂಘಿಕ ಬದುಕಿನತ್ತ ನಡೆದದ್ದು, ತಿರುಗಾಟ, ಬೇಟೆ ,ಬರವಣಿಗೆ, ಹೋರಾಟ, ಕಣ್ಣೀರು, ಬರ್ಬರತೆ, ಹೊಂದಾಣಿಕೆ ಪ್ರತಿ ಮಾನವನ ಮಿದುಳಿನಲ್ಲಿ ಅಚ್ಹೊತ್ತಿರುವದರಲ್ಲಿ ಸಂಶಯವೇ ಇಲ್ಲಾ. ನಮೆಲ್ಲ ಇರುವೆಕೆಯ ಮೊತ್ತದ ಮೂಲ ಆಕರಗಳು ಅವರ ಇರುವಿಕೆಯ ಕುರುಹುಗಳು. ಅವರ ಬುಡಕಟ್ಟು ಗಳಿಗಿದ್ದ ಹೆಸರುಗಳು, ಒಳ ಅರ್ಥಗಳು ಒಂದಕ್ಕಿಂತ ಒಂದು ರೋಚಕ. ಇ ಪದ್ಯ Lakota ಮೂಲ ನಿವಾಸಿಗಳ ಕಥೆ ಆಧಾರಿತ. ಲಕ್ಹೋಟಾ ಎಂದರೆ ಸಸ್ಯಗಾವಲಿನ ನಿವಾಸಿಗಳು, ಮೂಲ Sioux ಬುಡಕಟ್ಟು.
------
ಹಸುವಿನ ಮನಸಿನ ಬೇಡರ ಹುಡುಗ
ನೋಡುತ ಬೆಳೆದಾ ಹೂವಿನಂಥಹ ಹುಡುಗಿಯ
ಸಂಪನ್ನ ಪಾದುಕೆ ಪ್ರವಿಣೆ ಅವಳು, ಅವನೋ ಮುರುಕ ಗುಡಿಸಿಲವಾಸಿ
ಪದೆಯುವದೆಂತು ಹೊನ್ನಿನ ಮಣಿಯ?
ಮುಂಬೆಳಕಲಿ ನೋಡಿದ ಮೋಹಕ ಬೆಡಗಿಯ
ನಡುವಲ್ಲೊಂದು ಬಿಂದಿಗೆ, ಹೊರಟಿಹಳು ನೀರಿಗೆ
ದಡಬಡಿಸಿ ನುಡಿದಾ 'ಏ ಬೇ ಎವ್ವಾ, ಗಡಾನ ಕೊಡು ಮೆಟ್ಟ'
ಹರಿದ್ಹೋದ ಮೆಟ್ಟ ಅಜ್ಜಿ ಕೈಯಿಂದ ಕಿತ್ತಿ ಜಿಗಿದೊಡಿದ
ಮೆಕ್ಕೆಜೋಳದ ಬದುವಿನ ನಡುವೆ ನೀರ ಗುಂಡಿ
ಕೋಮಲ ಬಾಲೆ ಕೊಳೆಯಾದಿತು ನಿನ್ನ ಮೊಚ್ಚಿ
ನಾ ತುಂಬುವೆ ನಿನ್ನಯ ಮರಿಗೆ, ಏರಿಸುವೆ ಮಡಿಲಿಗೆ
ಎನುತಾ ಧುಮಿಕಿದ ಹೊಂಡಕೆ ತೋರುತ ತನ್ನ ಕೊಳಕ ಮಾಸಿದ ಮೆಟ್ಟ
ಗಲಗಲಾ ನಕ್ಕಳಾ ಬಾಲೆ, ಹೊಲೆಯುವರಿಲ್ಲವೇ ನಿನಗೆ ಒಳ್ಳೆ ಜೋಡು
ಇರುವಳೇ ಒಬ್ಬ ಅಂಧ ಅಜ್ಜಿ, ಬೇಕದಕೆ ನನಗೆ ಬೇರೆ ಜೋಡು
ನಾನೇನು ಗಾವಿಲಳೇ, ನಂಬಲೇಕೆ ನಾ ನಿನ್ನ
ನಚ್ಚು ನನ್ನ , ನೆಚ್ಚದಿರೆ ನಡಿ ಜೊತೆ ಎನ್ನ
ನೋಡುತಾ ನಿಂತಳಾ ತುಂಟಿ, ತಳದಲಿ ಕುಂತಿಹ ತುಂಟನ
ಉಟ್ಟರು ಕೆಟ್ಟ ಮೆಟ್ಟ ನೋಡಲೇನೂ ಹಟ್ಟಾಗಟ್ಟಾ
ತುಂಬಲಾ, ಬರುವೇಯಾ ಮೆಲುಧನಿಯಲಿ ಕೇಳಿದನಾತ
ಮೃಧು ಮಧುರ ಓಲೆಯಿತು ಸರಿ ಹೋಗುವಾ
ಗಂಟೆ ಕಳೆದರೂ ಬಾರದ ಮಗಳ ಹುಡುಕುತ
ಬಂದಳಾ ಚಿಗವ್ವಾ, ಕಂಡಳು ಒಂದರ ಬದಿ ಒಂದು
ಪಾದದ ಗುರುತಾ, ಮಣ್ಣಿನ ರಾಡಿಯಲಿ
ಹೊಂಡದ ಬದಿಯಲಿ ನಗುತಾ ಬಿದ್ದಿತ್ತು ಬರಿದಾದ ಬಿಂದಿಗಿ
-ಅನಿಲ ತಾಳಿಕೋಟಿ
Wednesday, March 7, 2012
Subscribe to:
Post Comments (Atom)
2 comments:
ಅನಿಲರೆ,
ಹೃದಯಸ್ಪರ್ಶಿಯಾದ ಕವನವನ್ನು ಬರೆದಿದ್ದೀರಿ. ಪ್ರಾಸಗಳ ಗೊಡವೆಗೆ ಹೋಗದೆ, ಸರಳ ನಿರೂಪಣೆಯಲ್ಲಿ ರಚಿತವಾದ ಈ ಕವನ ಜಾನಪದ ಮನಸ್ಸನ್ನು, ಜಾನಪದ ಸಾಹಿತ್ಯದ ವಿಧಾನವನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ.ನಿಮ್ಮಲ್ಲಿರುವ ಕವಿಗೆ ಅಭಿನಂದನೆಗಳು.
ಸುನಾಥ ಕಾಕಾ
ಧನ್ಯವಾದಗಳು
-ಅನಿಲ
Post a Comment