ಇವನು - " ಏನ್ರಿ, stage ಭಾರಿ ಮಾಡ್ಯಾರಲ್ರಿ ಸಂಪಿಗೆ ಅವರು"
ಅವನು - "ಹೌದ್ರಿ , ಕನ್ನಡ movie ಯಂತೆ production value ಭಾರಿ ಮ್ಯಾಲೆ ಹೊಗೆದ್ರಿ"
ಇ - "ನಮ್ಮ ಲಗ್ನದಾಗೂ ಇಷ್ಟು arrangement ಆಗಿದಿಲ್ಲ ಬಿಡ್ರಿ"
ಅ - "ಇದು ಒಬ್ಬರ್ದಲ್ರಿ ಲಗ್ನ , ಸಾಮೂಹಿಕ ನೋಡ್ರಿ - ಅದಕ್ಕ ಭರ್ಜರಿ ಮಾಡ್ಯಾರ"
ಇ - "ಖರೆ ಹೇಳಿದ್ರಿ. ಬಂದಕುಳೆ ಅತ್ತರ ಹೊಡದ ಏನೋ ಕೊಟ್ಟಲ್ರಿ sir?"
ಅ - "ಬುಕ್ಕ ಇದ್ದಂಗ ಅದರಿ , ಅಮ್ಯಾಗ ನೋಡುನ ತೊಗೋರಿ, ಪ್ರೊಗ್ರಾಮ್ ಆದ ಮ್ಯಾಗ"
ಇ - "ವಿಚಿತ್ರಾನ್ನ ದ ಜೋಷಿ ಯವರು ಬಂದರಲಾ, ನಗಸ್ತಾರ ಬಿಡ್ರಿ"
ಅ- "ಅವರು ನಗಸ್ಲಿಲ್ಲ ಅಂದ್ರ , ನಮ್ಮ ರಿಷಿ ಅದಾರ ಬಿಡೋ , ನಕ್ಕವರಿಗಿ SB card, ಅತ್ತವರಿಗೆ ಇನ್ನೌನ್ದಿಸ್ಟು ಅತ್ತರ ಹೊಡಿತಾರ"
ಇ - "ಲೋಕಲ್ ಮಂದಿನು ಹರಟೆ ಹೊಡ್ಯಕತ್ತರ್ಲ?"
ಅ- "ಕೇಳಿಲ್ಲೇನು , 'ಉದ್ಯೋಗಿಲ್ಲದ ಬಡಿಗ್ಯ, ಮಗನ ಮೋತಿ ಕೆತ್ತಿ ಮೂರ ಬಡಗಿ ಮಾಡಿದನಂತ'"
ಇ - "ಯಕ್ಸ್ಯಗಾನ ಕ್ಕ ಎಲ್ಲಿಂದೋ ಬಂದಾರನ್ತಲ್ರಿ ಮಂದಿ - Chicago, Toranto ಏನೋ ಅಂದಗಾತ್ರಿ"
ಅ- " ಕಲರ್ combination ನೋಡ್ರಿ , ಏ, ಮನಗಂಡ ರೆಡಿ ಆಗ್ಯಾರ - plane ನ್ಯಾಗ ಹೆಂಗ ಬಿಟ್ರ ಅಂತ ಇವ್ರೆಗೆ"
ಇ - "ಮಳ್ಳ, ಇಲ್ಲೇ ಬಂದ ಮ್ಯಾಗ ರೆಡಿ ಆಗ್ತಾರ ಅವರು - ಎಲ್ಲಾರು PhD ಇದ್ದಂಗ ಅದಾರು"
ಅ- "ಬಯಲಾಟದ ಗತೇ ಬೆಳತನಕ ಇರ್ತದ ಏನ ? ಆರಾಮ ಇಲ್ಲೇ ವಸ್ತಿ ವಗಿಬಹುದು ಇವತ್ತು"
ಇ - "ಇಲ್ಲ , ಇಲ್ಲ - ನಾಳೆ ಬ್ಯಾರೆ ಕಾರ್ಯಕ್ರಮ ಇರ್ತಾವ ,ಇಲ್ಲಿ ಮಂದಿಗೆ - ೧ hour ಅಂತ ಹಾಕ್ಯಾರ"
ಅ- "ಎಪ್ಪಾ , ಬಲರಾಮ, ಕೃಷ್ಣ ಏನ್ ಮಸ್ತ ಮಾತಡತಾರೋ , dailogue ಭಾರಿ ಚುರಕ ನೋಡ. ಏ , MI4 ನ್ಯಾಗ ಜಿಗಧಂಗ ಜಿಗಿತರಾಲ್ಲೋ?"
ಇ - "ವಾವ್ವ, ಜಾಂಬವಂತ ನೋಡಲ್ಲೇ - ವಾವ್ವ ಥೇಟ star wars ದ್ದ Chewbacca ಕಂಢಗ ಕಾಣತಾನಲ್ಲೋ? ಭಾರಿ scary ಅದಾನೋ"
ಅ- "acting ನೋಡು, ಜಬರ್ದಸ್ತ ಅದ ನೋಡ. ತ್ರೇತಾಯುಗದ ಹನುಮಾ, ದ್ವಾಪರ ಯುಗದ ಭೀಮಾ , ಜಾಂಬವಂತ - ಕೃಷ್ಣ ಹೋಗಿ ರಾಮ ಆಗುದ ನೋಡ - ಮಂದಿ ಊಟದ ಲೈನ್ ನ್ಯಾಗ ನಿಂತ , ತಾಟಮರತ ಹಂಗ ನೋಡಕೊತ ನಿಂತಾರ."
ಇ - " ಜೋರಾಗಿ , ಚಪ್ಪಾಳೆ ಅಂತ ನೆನಪ ಮಾಡೋದ ಬ್ಯಾಡ ನೋಡ - ಎಲ್ಲಾರು ಎದ್ದ ನಿಂತ ಬಾರಸ್ಲಿಕತ್ಯಾರ, ಅಸ್ಟರೊಳಗ ನಾಕ ಮಂದಿ ಉಟಕ್ಕ ಲೈನ್ ದಾಟಿ ಹೋದ್ರ ನೋಡ "
ಅ- "ಎಪ್ಪ , ಊಟ ದಿವಸ ಮಾಡುದ ಐತ್ಯೋ - ಅಸ್ಟ್ ಧೂರಿಂದ ಬಂದಾರು - ಮೊದಲ ಅವರ ತಾರೀಫ್ ಮಾಡ್ರೋ"
ಇ- "ಚೊಲೋ ಯಕ್ಸ್ಯಗಾನ ನೋಡಿಧಂಗಾತು ನೋಡು - next ಏನ್ನೈತಿ?"
ಅ- "ನಾ board ಇರದ ಬಸ್ಸನು ಹತ್ತಿ ಬಂದೆ ಇಲ್ಲಿಗೆ - ಏ ಭಾರಿ ಚೊಲೋ ಮಾಡ್ಯಾವ್ರಿ"
ಇ - " 'ಹುಡಗರು', ಹೌದ್ರಿ ಅದೇ ಮೂವಿ ಮೊನ್ನೆ ಇಂಡಿಯಾ ಕ್ಕ ಹೋದಾಗ ನೋಡ್ದಿದ್ರಿ - ಹುಡಿಗ್ಯಾರು ಒಂದು ಕೈ ಮ್ಯಾಲೆ ಅದಾರ ನೋಡ್ರಿ!"
ಅ- "ಹೌದ್ರಿ , ಅಕಿ ವಿದ್ಯಾ ಅಂತ್ರಿ, ಅದ ಜಾಂಬವತಿ ಅದಕ್ರಿ - ಭಾರಿ choreography ಮಾಡಿಸ್ಯಾಳ್ರಿ"
ಇ- "ಏ , ರೊಕ್ಕ ವಸೂಲಿ ಆತ ಬಿಡ್ರಿ ಇವತ್ತು "
ಅ- "ನಡ್ರಿ , ಊಟಾ ಹೊಡದ ಬರುಣ - ಸಂಪಿಗೆ ಊಟ - ಇ ವರುಷದಾಗ ಭಾರಿ ಅದ ನೋಡ್ರಿ "
ಇ - "ಹೊರಗಿಂದ ತರಸ್ತಾರಿ - ಅದಕ್ಕ ರುಚಿ ಜಾಸ್ತಿರೀ - ಪಲ್ಯಾ ನು ಮಸ್ತ ಅದರಿ"
ಅ- "ಅಲ್ಲೇನೋ , ಮ್ಯಾಗಿಂದ ಬಿಳಾಕತದಲ್ಲೋ? ನೋಡಿದ್ರ , ಲೋಟ ಹಿಡಕ್ಕೊಂಡು ಕುಡಿ ಬೇಕನ್ಸ್ತದ"
ಇ- "ಲೇ , ಮಗನ , ಅದು spriteವು , ನಿ ಏನ ವೈನ ಅನ್ತ ತಿಳದಿ ಏನ ? ನಮ್ಮ ವೈನಿ, ವೈನ ಇಡನ್ಗಿಲ್ಲಾ"
ಅ- "ಅಸ್ಟು hollywood ನಷ್ಟು ನಮ್ಮ ಸಂಪಿಗೆ ದ್ದು budget ಇಲ್ಲ ಬಿಡು"
ಇ - "ಎಪ್ಪ, ಹೊಟ್ಟಿ ತುಂಬಿದ ಮ್ಯಾಗ - ತಾಂಬೂಲ ಒಂದ ಬಿದ್ರ , ಖುಶಿ ಆಗ್ತದ ನೋಡ"
ಅ- "ರಿಶಿ ಅಂದ್ರ ಖುಶಿ ನೋಡ - ಇಲ್ಲೇ ಪಾನ ಇಟ್ಟಾರ ನೋಡ - ಎರಡ ತೊಗೊರೋ , ಅಮ್ಮಾವರಿಗೊಂದ, ನನಗೊಂದ"
ಇ- "ಮಕ್ಕಳಿಗ ?"
ಅ- "ಆ ಚಟ ಇಲ್ಲಾ ಬಿಡೋ - ಪಿಜ್ಜಾ ತಿಂದ್ರ ಸಾಕ ಅವಕ್ಕ - ಅದನ್ನು ಇಟ್ಟಿದ್ರಲ್ಲಾ"
ಇ - " ಅಲ್ರಿ, ಪ್ರೊಗ್ರಾಮ್ ಅಂತು ಭಾರಿ ಮಸ್ತ ಇದ್ದು ನೋಡ್ರಿ - ಕಣ್ನಿಗ ಖುಷಿ, ಮನಸ್ಸಿಗ ತೃಪ್ತಿ, ಹೊಟ್ಟಿಗಿಸ್ಟು, ಬ್ರೈನಿಗಸ್ಟು - ಇನ್ನೆನ ಬೇಕ್ರಿ?"
ಅ- "ಏ , ಇನ್ನೂ ಹಾಡ ಆದಾವ್ರಿ, ಬನ್ರಿ ಸ್ವಲ್ಪ ಕುಣಿಯೋಣ"
ಇ- "ಏ , ನನಗ ಎರಡು ಎಡಗಾಲ ಅವ ನೋಡ್ರಿ , ಕುಣಿಯಾಕ್ಕ ಬರಂಗಿಲ್ಲ"
ಅ- "ಏ, ಕುಡದ ಕುಣಿಯೋದ ಅಲ್ರಿ ಇದು - ಸುಮ್ಮ ಹಂಗ - ನಮ್ಮ ಸಂಪಿಗೆ ಬಾಂಧವರು ಹಾಡಖತ್ತಾರ - ಕಾಲು , ಕೈ ಆಡಸುಣ ಬರ್ರಿ"
ಇ- "ಏ ಪ್ರೊಗ್ರಾಮ್ ಗ್ರಾಂಡ್ ಆತ ನೋಡ್ರಿ - ಒಂದ್ ಮರ್ತೆಲ್ಲೋ?"
ಅ- "ಏನಪ , ಊಟ ಆತು , ಗಿಫ್ಟ್ ಆತು - ಮತ್ತೆನಿಂದು ?"
ಇ - "ಅದೇನೋ , ಫೋಟೋ ನೋಡಿ ವಧು ವರರ ಗುರ್ತಿಸಿ e competition ವೋಳಗ , ಕಣ್ಣಾಗ ಎಣ್ಣಿ ಹಾಕ್ಕೌಂಡು ರಾತ್ರಿ ಬಾರಾ ಮಟಾ ಇಕಿ ಅವರ ಇವರನ್ನ ಕಂಡ ಹಿಡದು SB card ಗೆದ್ದಾಳು - claim ಮಾಡಿ ತೊಗೊಳ್ಳುನು ಬಾ"
ಅ- "ಈಗ ಗೊತ್ತಾತ ನೋಡು - ರಿಷಿ ಇದ ಯಾಕ ಮಾಡ್ಯನ ಅಂತ "
ಇ -" ಯಾಕ?"
ಅ- "Obama ಹೇಳಿದಂಗ 'Economy Stimulate" ಮಾಡಾಕ - ನೋಡು - ಹೋಳಿಗಿ ರುಚಿ ಹತ್ತ , ಪಾನ ರುಚಿ ಬಿತ್ತ, ಯಕ್ಸ್ಯಗಾನ, ಹಾಡ ತಲ್ಯಾಗ ಕುಂತಾ, ಇನ್ನ ದಿವಸಾ ಮುಂಜಾನೆ ಸ್ಟಾರ್ ಬಕ್ಕಸಗ ಹೋಗಿ ಸ್ವಲ್ಪ bucks ಖರ್ಚ ಮಾಡ ಅಂತ "
ಇ - "ಇದ ಇರಬೇಕು , 'shovel ready job" ಅಂದ್ರ "
ಅ- "ನಡಿ, ಸ್ವಲ್ಪ ಕುರ್ಚಿ ಎತ್ತಿ ಇಡೋಣ"
-ಅನಿಲ ತಾಳಿಕೋಟಿ
Wednesday, March 7, 2012
Subscribe to:
Post Comments (Atom)
2 comments:
ಮಾತಿನ್ಯಾಗ ಕಟ್ಟಿದ ಮಂಟಪಾ ಕಣ್ಣೆದುರಿಗೇ ನಿಂತ್ಹಾಂಗ ಕಾಣಸ್ತದರಿ! ಭೇಶ್ ಅಂತೇನ್ರಿ!
ಸುನಾಥ ಕಾಕಾ
ಧನ್ಯವಾದಗಳು.
-ಅನಿಲ
Post a Comment